ಬಾಲಕಿಯರಿಗೆ ಕಿರುಕುಳ : ನಾಲ್ಕು ಪೋಕ್ಸೋ ಕೇಸು ದಾಖಲು
ಕಾಸರಗೋಡು: ಪ್ರಾಯ ಪೂರ್ತಿಯಾಗದ ಮೂವರು ಹೆಣ್ಮಕ್ಕಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬದಿ ಯಡ್ಕ, ಬೇಡಗ ಪೊಲೀಸ್ ಠಾಣೆಗಳಲ್ಲಾಗಿ ಒಟ್ಟು ನಾಲ್ಕು ಪೋಕ್ಸೋ ಕೇಸುಗಳನ್ನು ದಾಖಲಿಸಲಾಗಿದೆ. 11 ವರ್ಷ ಪ್ರಾಯದ ಬಾಲಕಿಗೆ ಕಿರುಕುಳ ನೀಡಿದ ಆರೋಪದಂತೆ ಆಕೆಯ ಎರಡನೇ ತಂದೆ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಆರೋಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಬೇಡಗ ಪೊಲೀಸರು ಮೂರು ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿ ದ್ದಾರೆ. ಈ ಮೂರು ಪ್ರಕರಣದಲ್ಲೂ ಆರೋಪಿಗಳು ಹಾಗೂ ದೂರುಗಾರರು ಪ್ರಾಯಪೂರ್ತಿ ಯಾಗದವರಾಗಿದ್ದಾರೆ. ಕೌನ್ಸಿಲಿಂಗ್ ನಡೆಸುತ್ತಿದ್ದ ವೇಳೆ ಈ ಹಿಂದೆ ನಡೆದ ಕಿರುಕುಳ ಘಟನೆಗಳು ಬೆಳಕಿಗೆ ಬಂದಿವೆ.