ಬಾವಿಗೆ ಬಿದ್ದ ಬಕೆಟ್ ಮುಚ್ಚಳ ತೆಗೆಯಲು ಇಳಿದ ಯುವಕ ಉಸಿರುಗಟ್ಟಿ ಮೃತ್ಯು

ಕಳಕೂಟಂ: ಬಕೆಟ್‌ನ ಮುಚ್ಚಳವನ್ನು ತೆಗೆಯಲೆಂದು ಬಾವಿಗಿಳಿದ ಯುವಕ ಉಸಿರುಗಟ್ಟಿ ಮೃತಪಟ್ಟರು. ಅಂಡೂರ್ ಕೋಣಂ ಪಳ್ಳಿಯಾಪರಂಬ್ ಕ್ಷೇತ್ರದ ಸಮೀಪ ನಿವಾಸಿ ಅನ್ಸಾರ್ (೩೧) ಮೃತಪಟ್ಟವರು. ನಿನ್ನೆ ಸಂಜೆ ೪.೩೦ಕ್ಕೆ ಘಟನೆ ನಡೆದಿದೆ. ನೀರು ತುಂಬಿಸಿಡುವ ಮಧ್ಯೆ ಬಕೆಟ್‌ನ ಮುಚ್ಚಳ ಬಾವಿಗೆ ಬಿದ್ದಿದೆ. ೬೫ ಅಡಿಯಷ್ಟು ಆಳವಿರುವ ೩ ಅಡಿ ಅಗಲದ ಬಾವಿಯಲ್ಲಿ ೨೦ ಅಡಿಯಷ್ಟು ನೀರು ಇದೆ. ಮುಚ್ಚಳವನ್ನು ತೆಗೆಯಲು ಅನ್ಸಾರ್ ಬಾವಿಗಿಳಿದಿದ್ದರು. ಅಲ್ಲಿ ವಾಯು ಲಭಿಸದೆ ಉಸಿರುಗಟ್ಟಿ ಕುಸಿದು ಬಿದ್ದರು. ಕಳಕೂಟಂನಿಂದ ತಲುಪಿದ ಅಗ್ನಿಶಾಮಕದಳ ೨ ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಿಂದ ಅವರನ್ನು ಮೇಲೆತ್ತಲಾಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ  ಮೃತಪಟ್ಟಿದ್ದಾರೆ.

ಕೊಲ್ಲಿಯಲ್ಲಿದ್ದ ಅನ್ಸಾರ್ ಒಂದು ತಿಂಗಳ ಹಿಂದೆ ಊರಿಗೆ ತಲುಪಿದ್ದರು. ಮೃತರು ಪತ್ನಿ ಸುರುಮಿ, ಮಕ್ಕಳಾದ ಆಯಾನ್, ಹವ್ವಜನ್ನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page