ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಇಳಿದು ಸಿಲುಕಿಕೊಂಡ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮದ ದಳ

ಕಾಸರಗೋಡು: ಮನೆ ಬಳಿಯ ೪೫ ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲೆಂದು ಇಳಿದ ನಂತರ ಮೇಲ ಕ್ಕೇರಲು ಸಾಧ್ಯವಾಗದೆ ಅದರಲ್ಲಿ ಸಿಲುಕಿಕೊಂಡ ವ್ಯಕ್ತಿಯನ್ನು ಕಾಸರ ಗೋಡು ಅಗ್ನಿಶಾಮಕದಳ ರಕ್ಷಿಸಿದ ಘಟನೆ ಮಾಯಿಪ್ಪಾಡಿ ಬಳಿ ನಡೆದಿದೆ. ಶಿರಿಬಾಗಿಲು ಪೆರಿಯಡ್ಕದ ಶಶಿ (50)ಯವರ ಬಾವಿಗೆ ನಿನ್ನೆ ಬೆಕ್ಕು ಬಿದ್ದಿತ್ತು. ಅದನ್ನು ಕಂಡ ಶಶಿ ತಕ್ಷಣ ಬಾವಿಗಿಳಿದು ಬೆಕ್ಕಿನ ಪ್ರಾಣ ಉಳಿಸಿ ದರೂ, ಅವರಿಗೆ ಮೇಲಕ್ಕೇರಲು ಸಾಧ್ಯವಾಗಲಿಲ್ಲ. ಆಗ ಸ್ಥಳೀಯರಾದ ರಾಜು ಮತ್ತು ಚಂದ್ರಹಾಸ ಎಂಬವರು ಸೇರಿ ಶಶಿಯವರನ್ನು ರಕ್ಷಿಸಲೆತ್ನಿಸಿದರೂ ಅದು ವಿಫಲಗೊಂಡಿದೆ. ಬಳಿಕ ಫಯರ್ ಆಂಡ್ ರೆಸ್ಕ್ಯೂ ಆಫೀಸರ್  ಎ.ಸಿ. ಅರುಣ್ ಕುಮಾರ್‌ರ ನೇತೃತ್ವದ ಅಗ್ನಿಶಾಮಕ ದಳ ತುರ್ತಾಗಿ ಸ್ಥಳಕ್ಕೆ ಧಾವಿಸಿ ಬಾವಿಯಿಂದ ಶಶಿಯವರನ್ನು ಮೇಲಕ್ಕೆತ್ತಿ ಅವರ ಪ್ರಾಣ ರಕ್ಷಿಸಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಗಳಾದ ಅಖಿಲ್ ಅಶೋಕನ್ ಎಲ್‌ಬಿ ಮತ್ತು ಅರ್ಜುನ್ ಕೃಷ್ಣ ಎಂಬವರು ಒಳಗೊಂಡಿದ್ದರು.

You cannot copy contents of this page