ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ಧನ್ರಾಜ್ ಪ್ರತಾಪನಗರ ನಿಧನಕ್ಕೆ ಶ್ರದ್ಧಾಂಜಲಿ
ಮಂಗಲ್ಪಾಡಿ: ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ, ಜೈಹನುಮಾನ್ ಫ್ರೆಂಡ್ಸ್ ಕ್ಲಬ್ ಪ್ರತಾಪನಗರ ಇದರ ಗೌರವಾಧ್ಯಕ್ಷ ಇತ್ತೀಚೆಗೆ ನಿಧನಹೊಂದಿದ ಧನ್ರಾಜ್ ಪ್ರತಾಪನಗರ ಇವರಿಗೆ ಶ್ರಧ್ಧಾಂಜಲಿ ಕಾರ್ಯಕ್ರಮ ಪ್ರತಾಪನಗರ ಸೋಂಕಾಲು ಜಂಕ್ಷನ್ನಲ್ಲಿ ನಿನ್ನೆ ಸಂಜೆ ನಡೆಯಿತು.
ಬಿಜೆಪಿ ಕೇರಳ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ನುಡಿನಮನ ಸಲ್ಲಿಸಿದರು. ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಶ್ರೀಕಾಂತ್ ಸಹಿತ ಹಲವು ಮುಖಂಡರು ಮಾತನಾಡಿದರು. ನಾರಾಯಣ, ಫ್ರೆಂಡ್ಸ್ಕ್ಲಬ್ ಅಧ್ಯಕ್ಷ ಸುರೇಶ್ ಜಿ. ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಮಯ್ಯ ಸ್ವಾಗತಿಸಿ, ಅವಿನಾಶ್ ಎಂ. ಪ್ರಸ್ತಾಪಿಸಿದರು. ದಿವಾಕರ ಪ್ರತಾಪನಗರ ಭಾಗವಹಿಸಿದರು. ಕಾರ್ಯಕರ್ತರು, ಮುಖಂಡರು ಸಹಿತ ಹಲವರು ಪುಷ್ಪಾರ್ಚನೆ ನಡೆಸಿದರು.