ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಕಾರ್ಯಾಗಾರ
ಕುಂಬ್ಡಾಜೆ: ಬಿಜೆಪಿ ಕುಂಬ್ಡಾಜೆ ಪಂ. ಸಮಿತಿ ನೇತೃತ್ವದಲ್ಲಿ ಪಕ್ಷದ ಮುಖಂಡರ ಕಾರ್ಯಾಗಾರ ಜರಗಿದ್ದು, ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್ ಉದ್ಘಾ ಟಿಸಿದರು. ಕುಂಬ್ಡಾಜೆ ಪಂಚಾಯತ್‌ನಲ್ಲಿ ಅಧಿಕಾರವನ್ನು ಮರಳಿ ಪಡೆಯಲು ಕಾರ್ಯಕರ್ತರು ವಾರ್ಡ್ ಮಟ್ಟದಲ್ಲಿ ಸಕ್ರಿಯರಾಗಿ ಮನೆ ಸಂಪರ್ಕ ನಡೆಸಿ ಮುಂದಿನ ಚುನಾವಣೆಗೆ ಮುಂಚಿತ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊ ಳ್ಳಲು ಬಾಕಿ ಇರುವವರನ್ನು ಸೇರಿಸಲು ಪ್ರಯತ್ನಿಸಬೇಕೆಂದು ಕರೆ ನೀಡಿದರು. ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿದರು.
ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಸುಧಾಮ ಗೋಸಾಡ, ಹರೀಶ್ ನಾರಂಪಾಡಿ, ಶೈಲಜಾ ಭಟ್ ಮಾತನಾಡಿದರು. ಜನಪ್ರತಿನಿಧಿಗಳಾದ ನಳಿನಿಕೃಷ್ಣ ಮಲ್ಲಮೂಲೆ, ಯಶೋಧ ಎನ್, ಸುನಿತಾ ಜೆ. ರೈ, ಮೀನಾಕ್ಷಿ ಎಸ್, ವಾಸುದೇವ ಭಟ್, ಜಯ ಪ್ರಕಾಶ್ ಶೆಟ್ಟಿ, ಬಿ.ಕೆ. ಸುರೇಶ್, ಪ್ರಮೋದ್ ಭಂಡಾರಿ, ರೋಶಿನಿ ಪೊಡಿ ಪ್ಪಳ್ಳ, ವಾರ್ಡ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದರು.