ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಆಯ್ಕೆ 17ರಂದು
ಕಲ್ಲಿಕೋಟೆ: ಬಿಜೆಪಿ ನೂತನ ರಾಜ್ಯ ಅಧ್ಯಕ್ಷರ ಆಯ್ಕೆ ಈ ತಿಂಗಳ ೧೭ರಂದು ನಡೆಯಲಿದೆಯೆಂದು ತಿಳಿದುಬಂದಿದೆ.
ಅಧ್ಯಕ್ಷ ಸ್ಥಾನಕ್ಕೆ ಎಂ.ಟಿ. ರಮೇಶ್, ವಿ. ಮುರಳೀಧರನ್, ಶೋಭಾ ಸುರೇಂದ್ರನ್ ಎಂಬಿವರ ಹೆಸರು ಪರಿಗಣನೆಯಲ್ಲಿದೆ. ಆದರೆ ಎಂ.ಟಿ. ರಮೇಶ್ ಅಧ್ಯಕ್ಷರಾಗುವ ಸಾಧತೆ ಹೆಚ್ಚಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ರಾಜ್ಯ ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ ವರದಿಯನ್ನು ಕೇಂದ್ರ ನಾಯಕತ್ವಕ್ಕೆ ನೀಡಲಾಗಿದೆ. ಎಂ.ಟಿ. ರಮೇಶ್‌ರಿಗೆ ಅಧ್ಯಕ್ಷ ಸ್ಥಾನಕ್ಕೆ ಅವಕಾಶವೊದಗಿ ಸಬೇಕೆಂದು ಒಂದು ವಿಭಾಗ ನೇತಾರರು ಸೂಚಿಸಿದ್ದಾರೆಂದು ತಿಳಿದುಬಂದಿದೆ.