ಬಿಜೆಪಿಯ ರಾಜ್ಯ ಪದಾಧಿಕಾರಿಗಳ ಘೋಷಣೆ: . ನಾಲ್ವರು ಪ್ರಧಾನ ಕಾರ್ಯದರ್ಶಿಗಳು, 10 ಉಪಾಧ್ಯಕ್ಷರು
ತಿರುವನಂತಪುರ: ಬಿಜೆಪಿ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಹೆಸರನ್ನು ಪಕ್ಷದ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಘೋಷಿಸಿದ್ದಾರೆ. ಇದರಂತೆ ಪಕ್ಷದ ರಾಜ್ಯ ಘಟಕಕ್ಕೆ ನಾಲ್ವರು ಪ್ರಧಾನ ಕಾರ್ಯದರ್ಶಿಗಳು ಮತ್ತು 10 ಉಪಾಧ್ಯಕ್ಷರು ಸೇರಿದಂತೆ ಇತರ ಹಲವು ಪದಾಧಿಕಾರಿಗಳ ಘೋಷಣೆ ನಡೆಸಲಾಗಿದೆ.
ಶೋಭಾ ಸುರೇಂದ್ರನ್ (ತೃಶೂರು), ಎಂ.ಟಿ. ರಮೇಶ್ (ಕಲ್ಲಿಕೋಟೆ), ನ್ಯಾಯವಾದಿ ಎಸ್. ಸುರೇಶ್ (ತಿರುವನಂತಪುರ), ಅನೂಪ್ ಆಂಟನಿ ಜೋಸೆಫ್ (ಪತ್ತನಂತಿಟ್ಟ) ಎಂಬವರನ್ನು ನೂತನ ಪ್ರಧಾನ ಕಾರ್ಯದರ್ಶಿ ಗಳನ್ನಾಗಿ ನೇಮಿಸಲಾಗಿದೆ.
ಡಾ. ಎಸ್. ರಾಧಾಕೃಷ್ಣನ್, ಸಿ. ಸದಾನಂದನ್ ಮಾಸ್ತರ್,ನ್ಯಾಯವಾದಿ ಪಿ. ಸುಧೀರ್, ಸಿ. ಕೃಷ್ಣ ಕುಮಾರ್, ನ್ಯಾಯವಾದಿ ಬಿ. ಗೋಪಾಲಕೃಷ್ಣನ್, ಡಾ. ಅಬ್ದುಲ್‌ಸಲಾಂ, ಕೇರಳದ ಮಾಜಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇ ಶಕಿ(ಎಡಿಜಿಪಿ) ಆರ್. ಶ್ರೀಲೇಖಾ, ಕೆ. ಸೋಮನ್, ನ್ಯಾಯವಾದಿ ಕೆ.ಕೆ. ಅನೀಶ್ ಕುಮಾರ್, ಮತ್ತು ನ್ಯಾಯ ವಾದಿ ಶೋನ್ ಜೋರ್ಜ್ ಎಂಬಿ ವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅಶೋಕನ್ ಕುಳ ನಾಡು, ಕೆ. ರಂಜಿತ್, ರೇಣು ಸುರೇಶ್, ನ್ಯಾಯವಾದಿ ವಿ.ವಿ. ರಾಜೇಶ್, ನ್ಯಾಯವಾದಿ ಪಂದಳಂ ಪ್ರತಾಪನ್, ಜಿಜಿ ಜೋಸೆಫ್, ಎಂ.ವಿ. ಗೋಪ ಕುಮಾರ್, ಪೂಂದುರ ಶ್ರೀ ಕುಮಾರ್, ಪಿ. ಶ್ಯಾಂರಾಜ್ ಮತ್ತು ಎಂ.ಪಿ. ಅಂಜನಾ ರಂಜಿತ್‌ರನ್ನು ಕಾರ್ಯದರ್ಶಿ ಗಳನ್ನಾಗಿ ನೇಮಿಸಲಾಗಿದೆ.
ನ್ಯಾಯವಾದಿ ಇ.ಕೃಷ್ಣದಾಸ್ ರನ್ನು ರಾಜ್ಯ ಕೋಶಾಧಿಕಾರಿಯನ್ನಾಗಿ ಆರಿಸಲಾಗಿದೆ. ಇದರ ಹೊರತಾಗಿ ಜಯರಾಜ್ ಕೈಮಲ್ (ಕಚೇರಿ ಕಾರ್ಯದರ್ಶಿ), ಅಭಿಜಿತ್ ಆರ್ ನಾಯರ್ (ಸೋಶಿಯಲ್ ಮೀಡಿಯಾ ಸಂಚಾಲಕ), ಸಂದೀಪ್ ಸೋಮನಾಥ್ (ಮೀಡಿಯಾ ಕನ್ವೀನರ್) ಮತ್ತು ಟಿ.ಪಿ. ಜಯಚಂದ್ರನ್ ಮಾಸ್ತರ್‌ರನ್ನು ರಾಜ್ಯ ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿದೆ.
ಇದು ಮಾತ್ರವಲ್ಲದೆ ಬಿಜೆಪಿ ನೇತಾರ ಕಾಸರಗೋಡಿನ ನ್ಯಾಯವಾದಿ ಕೆ. ಶ್ರೀಕಾಂತ್‌ರನ್ನು ಪಕ್ಷದ ಕಲ್ಲಿಕೋಟೆ ವಲಯಾಧ್ಯ ಕ್ಷರನ್ನಾಗಿ ನೇಮಿಸಲಾಗಿದೆ. ವಿ. ಉಣ್ಣಿಕೃಷ್ಣನ್‌ರನ್ನು ಪಾಲಕ್ಕಾಡ್, ಎ. ನಾಗೇಶ್‌ರನ್ನು ಎರ್ನಾಕುಳಂ, ಎನ್. ಹರಿ ಆಲಪ್ಪುಳ ಮತ್ತು ಬಿ.ಬಿ ಗೋಪಕುಮಾರ್‌ರನ್ನು ತಿರುವ ನಂತಪುರ ವಲಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಬಿಜೆಪಿ: ನ್ಯಾಯವಾದಿ ಕೆ. ಶ್ರೀಕಾಂತ್‌ಗೆ ಹೊಸ ಹೊಣೆಗಾರಿಕೆ ತಿರುವನಂತಪುರ: ಬಿಜೆಪಿ ರಾಜ್ಯ ಘಟಕದ ಹೊಸ ಪದಾಧಿಕಾರಿಗಳನ್ನು ಪಕ್ಷದ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಘೋಷಿಸಿದ್ದು, ಅದರಲ್ಲಿ ಬಿಜೆಪಿಯ ಹಿರಿಯ ನಾಯಕರಲ್ಲೋ ರ್ವನಾಗಿರುವ ಕಾಸರಗೋಡಿನ ನ್ಯಾಯ ವಾದಿ ಕೆ. ಶ್ರೀಕಾಂತ್‌ರಿಗೆ ಹೊಸ ಹೊಣೆಗಾರಿಕೆ ವಹಿಸಿಕೊಡಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಶ್ರೀಕಾಂತ್‌ರನ್ನು ಈಗ ಬಿಜೆಪಿಯ ಕಲ್ಲಿ ಕೋಟೆ ವಲಯ ಅಧ್ಯಕ್ಷರನ್ನಾಗಿ ಹೊಸ ಹೊಣೆಗಾರಿಕೆ ವಹಿಸಿಕೊಡ ಲಾಗಿದೆ. ಬಿಜೆಪಿಯಕಾಸರಗೋಡು-೧, ಕಣ್ಣೂರಿನ-೨, ಕಲ್ಲಿಕೋ ಟೆಯ ಮೂರು ಜಿಲ್ಲೆಗಳು ಕಲ್ಲಿಕೋಟೆ ವಲಯದಲ್ಲಿ ಒಳಗೊಂಡಿದೆ. ಇದರ ಹೊಣೆ ಗಾರಿಕೆಯನ್ನು ಪಕ್ಷ ಶ್ರೀಕಾಂತ್‌ಗೆ ವಹಿಸಿ ಕೊಟ್ಟಿದೆ. ಅದಕ್ಕೂ ಮೊದಲು ಶ್ರೀಕಾಂತ್ ವಯನಾಡು ಜಿಲ್ಲೆಯ ಹೊಣೆಗಾರಿಕೆ ಹೊಂದಿದ್ದ ರಾಜ್ಯ ಕಾರ್ಯದರ್ಶಿ ಯಾಗಿಯೂ ಸೇವೆ ಸಲ್ಲಿಸಿದ್ದರು.