ಬಿಟ್ ಕಾಯಿನ್ ವಂಚನೆ: ಯುವಕನ ಒಂದೂವರೆ ಕೋಟಿ ರೂ.ಲಪಟಾವಣೆ

ಹೊಸದುರ್ಗ: ಬಿಟ್ ಕಾಯಿನ್ ವಂಚನೆಗೆ ಒಳಗಾದ ಯುವಕನಿಗೆ ಒಂದೂವರೆ ಕೋಟಿ ರೂಪಾಯಿ ನಷ್ಟಗೊಂಡಿತು.

ಕಾಞಂಗಾಡ್ ಕುಶಾಲ್‌ನಗರ  ಜಬಿನ ಮಂಜಿಲ್‌ನ ಖಾಲಿದ್ (೪೫)ರ ಹಣ ನಷ್ಟಗೊಂಡಿರುವುದಾಗಿ ದೂರಲಾಗಿದೆ.  ಘಟನೆಗೆ ಸಂಬಂಧಿಸಿ ಖಾಲಿದ್‌ರ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ಕಳೆದ ತಿಂಗಳ ೨೩ರಿಂದ  ೨೫ರ ವರೆಗಿನ ದಿನಗಳಲ್ಲಿ ಅಬು ದಾಬಿಯಲ್ಲಿ ವಾಸಿಸಿ ಕೆಲಸ ನಿರ್ವಹಿಸಿದ್ದ ಖಾಲಿದ್‌ರ ಬಳಿಗೆ ತಲುಪಿ ಬಿಟ್ ಕಾಯಿನ್ ಟ್ರೇಡ್‌ರ್ ಎಂದು ತಿಳಿಸಿ  ತೆಲಂಗಾನ ಹೈದರಾಬಾದ್ ಸಿಟಿಯ ವರಪ್ರಸಾದ್, ಆಂಧ್ರಪ್ರದೇಶದ ಹರಿವೆಂಕಟ ಎಂಬಿವರು ಹಣ ಲಪಟಾಯಿಸಿರು ವುದಾಗಿ ದೂರಲಾಗಿದೆ. ಹರಿ ವೆಂಕಟ್‌ಗೆ ಬಿಟ್ ಕಾಯಿನ್ ಮಾರಾಟ ಮಾಡಿದರೆ ಒಂದು ಗಂಟೆಯೊಳಗೆ ಆ ಮೊತ್ತ ಹಾಗೂ ೧೦ ಶೇ. ಲಾಭ ಮರಳಿ ನೀಡುವುದಾಗಿ ತಿಳಿಸಿ ವಂಚನೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page