ಬಿದ್ದು ಸಿಕ್ಕಿದ ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ರಬ್ಬರ್ ಕೃಷಿಕ

ನೀರ್ಚಾಲು: ಪ್ರಯಾಣ ವೇಳೆ ಬಿದ್ದು ಸಿಕ್ಕಿದ ಹಣವನ್ನು ಮರಳಿ ನೀಡಿ ರಬ್ಬರ್ ಕೃಷಿಕ ಮಾದರಿಯಾಗಿದ್ದಾರೆ. ಕನ್ಯಪ್ಪಾಡಿ ಸಮೀಪದ ಮಾಡತ್ತಡ್ಕದ ಶಾಜಿ ಎಂಬವರು ಪ್ರಾಮಾಣಿಕತೆ ತೋರಿದ ವ್ಯಕ್ತಿಯಾಗಿದ್ದಾರೆ. ಕನ್ಯಪ್ಪಾಡಿಯಲ್ಲಿ ವ್ಯಾಪಾರಿಯಾಗಿರುವ ಕಬೀರ್ ಎಂಬವರು ಪ್ರಯಾಣ ವೇಳೆ ಅವರ ಕೈಯಲ್ಲಿದ್ದ 30 ಸಾವಿರ ರೂಪಾಯಿ ಬಿದ್ದು ಹೋಗಿತ್ತು. ಆ ಹಣ ಆ ರಸ್ತೆಯಲ್ಲಿ ಆಗಮಿಸಿದ ಶಾಜಿಗೆ ಲಭಿಸಿತ್ತು. ಹಣ ಬಿದ್ದು ಸಿಕ್ಕಿದೆಯೆಂದೂ ಪುರಾವೆ ನೀಡಿದರೆ ಮರಳಿಸುವುದಾಗಿ ಶಾಜಿ ಪ್ರಚಾರ ನಡೆಸಿದರು. ಈ ವಿಷಯ ಕಬೀರ್‌ಗೆ ತಿಳಿದು ಬಂದಿದ್ದು, ಅನಂತರ  ಶಾಜಿಯನ್ನು ಸಂಪರ್ಕಿಸಿದ್ದರು. ಬಳಿಕ ಅವರು ಶಾಜಿಯವರು ಕಬೀರ್‌ಗೆ ಹಣ ಹಸ್ತಾಂತರಿಸಿದರು.

RELATED NEWS

You cannot copy contents of this page