ಬಿರುವೆರೆ ಕುಡ್ಲ ಮಂಜೇಶ್ವರ ತಾಲೂಕು ಯೂನಿಟ್ನಿಂದ ಶಾಲಾ ಮಕ್ಕಳಿಕೆ ಕಲಿಕೆ ಸಾಮಗ್ರಿ ವಿತರಣೆ
ಮಂಜೇಶ್ವರ: ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಯೂನಿಟ್ ವತಿಯಿಂದ 3ನೇ ಸೇವಾ ಯೋಜನೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕೆ ಸಾಮಾಗ್ರಿಗಳು ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಮಂಗಲ್ಪಾಡಿ ಅಂಬಾರು ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಿತು. ಯು.ಪಿ ಹಾಗೂ ಹೈಸ್ಕೂಲ್ ವಿಭಾಗದ 16 ಶಾಲಾ ಮಕ್ಕಳಿಗೆ ಶೈಕ್ಷಣಿಕ ವರ್ಷಕ್ಕೆ ಬೇಕಾದ ಪುಸ್ತಕ, ಬ್ಯಾಗ್, ಕೊಡೆ ಹಾಗೂ ಇನ್ನಿತರ ವಸ್ತುಗಳನ್ನು ವಿತರಿಸಲಾಯಿತು.
ಅದೇ ರೀತಿ ಪ್ಲಸ್-ಟು ವಿಜ್ಞಾನ ವಿಭಾಗದಲ್ಲಿ 97% ಪಡೆದ ದೀಕ್ಷಾ ಡಿ. ಜೆ, ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 98.7% ಪಡೆದ ದಕ್ಷ.ಜೆ, ಶ್ರೀ ವಲ್ಲಿ ಇವರನ್ನು ಅಭಿನಂದಿಸಲಾಯಿತು. ಶೋಭಾ ರೋಹಿತ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಶೀನಪ್ಪ ಪೂಜಾರಿ ಅಲಾರು, ಶೇಖರ ಪೂಜಾರಿ ಮಂಗಲ್ಪಾಡಿ, ಪೂವಪ್ಪ ಪೂಜಾರಿ, ಸನಿಲ್ ಚೆರುಗೋಳಿ , ಕಾರ್ಯದರ್ಶಿ ಅನಿಲ್ ಪೂಜಾರಿ ಪ್ರತಾಪನಗರ, ಸಚಿನ್ ಅಂಬಾರು, ಶಿವಪ್ರಸಾದ್ ಮಾಸ್ಟರ್ ಕುಡಾಲು, ಸಂಘಟನೆಯ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.