ಬೀದಿ ನಾಯಿಯನ್ನು ಕಂಡು ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ದಾರುಣ ಮೃತ್ಯು
ಕಣ್ಣೂರು: ಗೆಳೆಯರ ಜೊತೆ ಆಟವಾಡುತ್ತಿದ್ದ ಮಧ್ಯೆ ಬೀದಿ ನಾಯಿಯನ್ನು ಕಂಡು ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ದಾರುಣ ಮೃತ್ಯು ಸಂಭವಿಸಿದೆ. ಕಣ್ಣೂರು ತೂವಕ್ಕುನ್ನುನ ಮುಹಮ್ಮದ್ ಫಸಲ್ (9) ಮೃತ ಬಾಲಕ. ನಿನ್ನೆ ಸಂಜೆ ೫ಗಂಟೆಗೆ ಘಟನೆ ನಡೆದಿದೆ. ಆಟವಾ ಡುತ್ತಿದ್ದ ಮಕ್ಕಳತ್ತ ಬೀದಿ ನಾಯಿ ತಲುಪಿದ್ದು, ಇದನ್ನು ಕಂಡ ಮಕ್ಕಳು ಚದುರಿ ಓಡಿದರು. ರಾತ್ರಿ ೭ ಗಂಟೆ ಯಾದರೂ ಫಸಲ್ ಮನೆಗೆ ತಲುಪದ ಹಿನ್ನೆಲೆಯಲ್ಲಿ ಮನೆ ಮಂದಿ ಹುಡು ಕಾಡಿದಾಗ ಬಾಲಕ ನಾಪತ್ತೆಯಾದ ಬಗ್ಗೆ ತಿಳಿದುಬಂದಿದ್ದು, ಉಳಿದವರೆಲ್ಲ ಅವರವರ ಮನೆಗೆ ತಲುಪಿದ್ದರು. ಈ ವೇಳೆ ನಾಯಿಯನ್ನು ಕಂಡು ಹೆದರಿ ಓಡಿದ ವಿಷಯ ತಿಳಿದುಬಂದಿದ್ದು, ಹುಡುಕಾಡುತ್ತಿ ದ್ದಂತೆ ರಾತ್ರಿ 8 ಗಂಟೆ ವೇಳೆ ಆವರಣಗೋಡೆಯಿಲ್ಲದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮ ಕದಳ ತಲುಪಿ ಮೃತದೇಹ ವನ್ನು ಹೊರತೆಗೆಯಲಾಗಿದ್ದು, ತಲಶ್ಶೇರಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಯಿತು. ಚೇಲಕ್ಕಾಡ್ ಉಸ್ಮಾನ್ ಹಾಗೂ ಫೌಸಿಯಾ ದಂಪತಿಯ ಪುತ್ರನಾದ ಬಾಲಕ ಸಹೋದರಿ ಅಲ್ಫಾ ಫಾತಿಮ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾನೆ.