ಉಪ್ಪಳ: 45 ಅಡಿ ಆಳದ ಬಾವಿಯೊಂದಕ್ಕೆ ಬಿದ್ದ ಜಾನು ವಾರುವನ್ನು ಉಪ್ಪಳ ಅಗ್ನಿಶಾಮಕ ದಳ ಸಾಹಸದಿಂದ ರಕ್ಷಿಸಿದ ಘಟನೆ ನಡೆದಿದೆ. ನಿನ್ನೆ ಸಂಜೆ ಸುಮಾರು 6ಗಂಟೆಗೆ ಪೈವಳಿಕೆಯ ಪೆರಿಯಡ್ಕ ನಿವಾಸಿ ಈಶ್ವರ ನಾಯ್ಕ್ ಎಂಬವರ ಜಾನುವಾರು ಸಮೀಪದ ಭಾಸ್ಕರ ಎಂಬವರ ಮನೆ ಬಳಿಯಿರುವ ಬಾವಿಗೆ ಬಿದ್ದಿದೆ. ಮಾಹಿತಿ ತಿಳಿದು ಕೂಡಲೇ ತಲುಪಿದ ಉಪ್ಪಳ ಅಗ್ನಿಶಮಕದಳದ ಸೀನಿಯರ್ ಆಫೀಸರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಫಯರ್ಮೆನ್ಗಳಾದ ಪಶುಪತಿ, ಮಹೇಶ್ ಬಾವಿಗೆ ಇಳಿದು ಜಾನುವಾರು ವನ್ನು ಉಪಕರಣಗಳ ಮೂಲಕ ಮೇಲೆತ್ತಿ ರಕ್ಷಿಸಿದ್ದಾರೆ. ಫಯರ್ ಮೆನ್ ವಿಬಿನ್, ಹೋಮ್ಗಾರ್ಡ್ ಸುಕೇಶ್, ಚಾಲಕ ಆರಾದ್ ನೇತೃತ್ವ ನೀಡಿದರು.
