ಬೆಂಗಳೂರಿನಿಂದ ಮಾದಕವಸ್ತು ತಂದು ಹಾಸ್ಟೆಲ್‌ಗಳಲ್ಲಿ ವಿತರಣೆ: ಇಬ್ಬರು ಯುವಕರು ಸೆರೆ

ಎರ್ನಾಕುಳಂ: ಬೆಂಗಳೂರಿ ನಿಂದ ಎಂಡಿಎಂಎ ತಂದು ಎರ್ನಾಕುಳಂನ ಹಾಸ್ಟೆಲ್‌ಗಳಲ್ಲಿ ವಿತರಿಸುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿ ದ್ದಾರೆ. ಪತ್ತನಂತಿಟ್ಟ ನಿವಾಸಿಯಾದ ಅಶ್ವಿನ್, ಕೋಟಯಂ ನಿವಾಸಿಯಾದ ಅಕ್ಬರ್ ಖಾನ್ ಸೆರೆಯಾದವರು. 106 ಗ್ರಾಂ ಎಂಡಿಎಂಎ ಇವರಿಂದ ವಶಪಡಿಸಲಾಗಿದೆ. ರಹಸ್ಯ ಮಾಹಿತಿಯ ಆಧಾರದಲ್ಲಿ ನಡೆಸಿದ ತಪಾಸಣೆಯಲ್ಲಿ ಪಾಲಾರಿವೆಟ್ಟಂ ಸೌತ್ ಜನತ ರಸ್ತೆ ಪರಿಸರದಲ್ಲಿ ಇವರನ್ನು ಸೆರೆ ಹಿಡಿಯಲಾಗಿದೆ. ಎಂಡಿಎಂಎ ಪಾಕೆಟ್‌ನಲ್ಲೂ, ಶೋಲ್ಡರ್ ಬ್ಯಾಗ್‌ನಲ್ಲೂ ಅಡಗಿಸಿಟ್ಟಿದ್ದರು. ಬೆಂಗಳೂರಿನ ರಖಂ ವ್ಯಾಪಾರಿಗಳಿಂದ ಮಾದಕ ಪದಾರ್ಥ ಖರೀದಿಸಿ ಕಲೂರು, ಪಾಲಾರಿವಟ್ಟಂ ಪ್ರದೇಶಗಳಲ್ಲಿ ಯುವಕರು ವಾಸಿಸುವ ಹಾಸ್ಟೆಲ್‌ಗಳನ್ನು ಕೇಂದ್ರೀಕರಿಸಿ ಚಿಲ್ಲರೆ ಮಾರಾಟ ನಡೆಸುತ್ತಿರುವುದು ಇವರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page