ಬೆಂಗಳೂರು ಪೊಲೀಸರ ಕಸ್ಟಡಿಯಿಂದ ಪರಾರಿಯಾದ ಆರೋಪಿ ತೃಶೂರಿನಲ್ಲಿ ಸೆರೆ 

ತೃಶೂರು: ಬೆಂಗಳೂರು ಪೊಲೀಸ್ ಕಸ್ಟಡಿಯಿಂದ ಕೈಕೋಳ ಸಹಿತ ಪರಾರಿಯಾದ ಮಾದಕವಸ್ತು ಪ್ರಕರಣದ ಆರೋಪಿಯನ್ನು 9 ದಿನಗಳ ಕಾಲ ನಡೆಸಿದ ತೀವ್ರ ಶೋಧ ಬಳಿಕ ತೃಶರಿನಿಂದ ಸೆರೆಹಿಡಿಯಲಾಗಿದೆ.

ಮನಕ್ಕೋಡಿ ಚೆರ್ವತ್ತೂರು ಆಲ್ವಿನ್ (21) ಎಂಬಾತನನ್ನು ನೆಡುಪುಳ ಪೊಲೀಸರು ಬಂಧಿಸಿದ್ದಾರೆ. 70 ಗ್ರಾಮ್ ಮಾದಕವಸ್ತು, 4 ಕಿಲೋ ಗಾಂಜಾ ಮಾರಾಟಗೈದ ಪ್ರಕರಣಕ್ಕೆ ಸಂಬಂಧಿಸಿ ಆಲ್ವಿನ್ ಹಾಗೂ ಪ್ರಾಯಪೂರ್ತಿಯಾಗದ ಮೂವರನ್ನು ಕರ್ನಾಟಕ ಪೊಲೀಸರು ಸೆರೆಹಿಡಿದಿ ದ್ದರು. ಬಳಿಕ ಬೆಂಗಳೂರಿಗೆ ತಲುಪಿಸಿ ಮಾರ್ಚ್ 29ರಂದು  ಮಾಹಿತಿ ಸಂಗ್ರಹಿಸಿದ ಬಳಿಕ ಹೊಸೂರಿನ ಹೋಟೆಲ್‌ನಲ್ಲಿ ಆಲ್ವಿನ್‌ನೊಂದಿಗೆ ಪೊಲೀಸರು ತಂಗಿದ್ದರು. ಆಲ್ವಿನ್‌ನ ಕಾಲಿಗೆ ಕೋಳ ತೊಡಿಸಿ ಮಂಚದ ಕಾಲಿಗೆ ಕಟ್ಟಿಹಾಕಲಾಗಿತ್ತು. ಪೊಲೀ ಸರು ಬೆಳಿಗ್ಗೆ ಎಚ್ಚೆತ್ತು ನೋಡಿದಾಗ ಆಲ್ವಿನ್ ಅಲ್ಲಿಂದ ಪರಾರಿಯಾಗಿ ರುವುದಾಗಿ ತಿಳಿದುಬಂದಿತ್ತು. ಯಾವುದೇ ಶಬ್ದ ಉಂಟಾಗದಂತೆ  ಜಾಗ್ರತೆ ವಹಿಸಿ ಮಂಚದ ಕಾಲಿನಿಂದ ಕೋಳವನ್ನು ಬಿಡಿಸಿ ಮೂರನೇ ಮಹಡಿಯಿಂದ ಪೈಪು ಮೂಲಕ ಕೆಳಕ್ಕೆ ಜಾರಿ ಇಳಿದಿದ್ದನು. ಅನಂತರ  ಆ ರಸ್ತೆಯಲ್ಲಿ ಬಂದ ಬೈಕ್‌ನಲ್ಲಿ ಸಂಚರಿಸಿ ಕೆ.ಆರ್.ಪುರಕ್ಕೆ ತಲುಪಿದ್ದನು. ಬಳಿಕ ಪಾದಚಾರಿಯೊಬ್ಬನ ಕೈಯಿಂದ ಮೊಬೈಲ್ ಪಡೆದು ಮನೆಗೆ ಫೋನ್ ಕರೆ ಮಾಡಿದ್ದನೆನ್ನಲಾಗಿದೆ. ಇದರಂತೆ ಬೆಂಗಳೂರಿಗೆ ತಲುಪಿದ ಸಂಬಂಧಿ ಕರು ಕೇರಳಕ್ಕೆ ತಲುಪಿಸಿದ್ದರು. ಪರಾರಿಯಾದ ಆಲ್ವಿನ್‌ಗಾಗಿ ಮೂರು ರಾಜ್ಯಗಳಲ್ಲಿ ಹುಡುಕಾಟ ನಡೆಸಿದಾಗ ಪೊಲೀಸರಿಗೆ ಆರೋಪಿ ಕೇರಳಕ್ಕೆ ತಲುಪಿದ ವಿಷಯ ತಿಳಿದುಬಂದಿದೆ. ಅದರಂತೆ ಕೇರಳಕ್ಕೆ ತಲುಪಿದ ಪೊಲೀ ಸರು ಆರೋಪಿಯನ್ನು ಬಂಧಿಸಿದ್ದಾರೆ.

RELATED NEWS

You cannot copy contents of this page