ಬೆಕ್ಕನ್ನು ರಕ್ಷಿಸಲೆಂದು ಬೈಕ್ ನಿಲ್ಲಿಸಿ ರಸ್ತೆಗಿಳಿದ ಯುವಕ ಕಾರು ಢಿಕ್ಕಿ ಹೊಡೆದು ಮೃತ್ಯು

ತೃಶೂರು: ರಸ್ತೆಯಲ್ಲಿ ಸಿಲುಕಿಕೊಂಡ ಬೆಕ್ಕನ್ನು ಪಾರು ಮಾಡಲೆಂದು ಬೈಕ್ ನಿಲ್ಲಿಸಿ ರಸ್ತೆಗಿಳಿದ ಯುವಕ  ಕಾರು ಢಿಕ್ಕಿ ಹೊಡೆ ದು ಮೃತಪಟ್ಟರು. ಕಾಳತ್ತೋಡ್ ಚಿಟ್ಟಿಲ ಪ್ಪಳ್ಳಿ ನಿವಾಸಿ ಸಿಜೋ (42) ಮೃತಪ ಟ್ಟವರು. ನಿನ್ನೆ ರಾತ್ರಿ 9.30ಕ್ಕೆ ಘಟನೆ ನಡೆದಿದೆ. ಸಿಜೋ ಬೈಕ್‌ನಲ್ಲಿ ಮನೆಯತ್ತ ಸಂಚರಿಸುತ್ತಿದ್ದಾಗ ರಸ್ತೆಯಲ್ಲಿ ಬೆಕ್ಕೊಂದು ಮಲಗಿರುವುದನ್ನು ಕಂಡಿದ್ದಾರೆ. ಅದನ್ನು ಬದುಕಿಸಲೆಂದು ಬೈಕ್ ನಿಲ್ಲಿಸಿ ರಸ್ತೆಗಿಳಿ ದಿದ್ದಾರೆ. ಈ ವೇಳೆ ಮುಂಭಾಗ ದಿಂದ ಬಂದ ಕಾರು ಇವರಿಗೆ ಢಿಕ್ಕಿ ಹೊಡೆ ದಿದೆ. ಅಪಘಾತವನ್ನು ಕಂಡ ಸ್ಥಳೀಯರು ಕೂಡಲೇ ಗಾಯಾಳುವನ್ನು ತೃಶೂರ್‌ನ ಖಾಸಗಿ ಆಸ್ಪತ್ರೆಗೆ ಚಲುಪಿಸಿದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮಣ್ಣುತ್ತಿ ಪೊಲೀಸರು ಸ್ಥಳಕ್ಕೆ ತಲುಪಿ ಸ್ಥಳೀಯ. ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

You cannot copy contents of this page