ಬೆಡ್‌ರೂಂನಲ್ಲಿ ಸಿಲುಕಿದ ಒಂದು ವರ್ಷದ ಮಗು: ರಕ್ಷಿಸಿದ ಅಗ್ನಿಶಾಮಕದಳ

ಕಾಸರಗೋಡು: ಮನೆಯ ಬೆಡ್‌ರೂಮ್ ಬಾಗಿಲು ಮುಚ್ಚಿ ಬಳಿಕ   ತೆರೆಯಲು ಸಾಧ್ಯವಾಗದೆ ಅದರೊಳಗೆ ಒಂದು ವರ್ಷದ ಹೆಣ್ಣು ಮಗು  ಸಿಲುಕಿಕೊಂಡ ಘಟನೆ ನಡೆದಿದೆ. ಕೊನೆಗೆ ಘಟನೆ ನಡೆದ ಸ್ಥಳಕ್ಕೆ ಕಾಸರಗೋಡು ಅಗ್ನಿಶಾಮ ಕದಳ ತಲುಪಿ ಮಗುವನ್ನು ರಕ್ಷಿಸಿದ್ದಾರೆ. ನಿನ್ನೆ ರಾತ್ರಿ ಸುಮಾರು ೭.೧೫ರ ವೇಳೆಗೆ ನಗರದ ತಾಯ ಲಂಗಾಡಿ ಶಾಲೆ ಬಳಿಯ ಮೊಹಮ್ಮದ್ ಸನಾಹ್ ಎಂಬವರ  ಪುತ್ರಿ ಅಸಿಯಾಳನ್ನು ತಾಯಿ ಬೆಡ್‌ರೂಮ್‌ನಲ್ಲಿ ಮಲಗಿಸಿ ಬಾಗಿಲು ಮುಚ್ಚಿ ಹೊರಕ್ಕೆ ಬಂದಿದ್ದರು.  ಅಲ್ಪ ಸಮಯದ ಬಳಿಕ ಬಾಗಿಲನ್ನು ತೆರೆಯಲು ಹೋದಾಗ ಒಳಗಿನಿಂದ ಇದ್ದಕ್ಕಿದ್ದಂತೆ ಲಾಕ್‌ಗೊಂಡಿತು. ಕೊಠಡಿಯ ಬಾಗಿಲು ತೆರೆಯಲು ಸಾಧ್ಯವಾಗದೆ   ಮಗು ಅದರೊಳಗೆ ಸಿಲುಕಿಕೊಂಡಿತು. ಕೊನೆಗೆ ಮನೆಯವರು ನೀಡಿದ ಮಾಹಿತಿಯಂತೆ ಕಾಸರಗೋಡು ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವೇಣುಗೋಪಾ ಲನ್‌ರ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕಾ ಗಮಿಸಿ ಡೋರ್  ಬ್ರೆಕರ್ ಬಳಸಿ ಬಾಗಿಲನ್ನು ಮುರಿದು ಮಗುವನ್ನು ಕೊಠಡಿಯಿಂದ ರಕ್ಷಿಸಿದರು. ಈ ರಕ್ಷಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳದ ಇತರ ರೆಸ್ಕ್ಯೂ ಆಫೀಸರ್‌ಗಳಾದ ಟಿ. ಅಮಲ್‌ಜಿತ್, ಕೆ.ವಿ. ಜಿತಿನ್‌ಕೃಷ್ಣನ್, ಒ.ಕೆ. ಅನುಶ್ರೀ ಮತ್ತು ಹೋಮ್ ಗಾರ್ಡ್ ಎಸ್. ಶೋಭಿನ್ ಎಂಬಿವರು ಒಳಗೊಂಡಿದ್ದರು.

You cannot copy contents of this page