ಬೆದ್ರಡ್ಕ: ಭಾರತೀಯ ಸೇನೆಗೆ ಆಯ್ಕೆಗೊಂಡ ಆಟೋ ಚಾಲಕನಿಗೆ ಸನ್ಮಾನ

ಬೆದ್ರಡ್ಕ: ಭಾರತೀಯ ಸೇನೆಗೆ ಆಯ್ಕೆಗೊಂಡ ಬೆದ್ರಡ್ಕ ನಿವಾಸಿ ರಂಜಿತ್‌ರನ್ನು ಬೆದ್ರಡ್ಕದ ಯುವ ತೇಜಸ್ ತಂಡದ ನೇತೃತ್ವದಲ್ಲಿ ಆಟೋಚಾಲಕರು ಸನ್ಮಾನಿಸಿ ಗೌರವಿಸಿದರು. ಈ ಹಿಂದೆ ಬೆದ್ರಡ್ಕದಲ್ಲಿ ಆಟೋಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ರಂಜಿತ್ ಇತ್ತೀಚೆಗೆ ಭಾರತೀಯ ಸೇನೆಗೆ ಆಯ್ಕೆಗೊಂಡಿದ್ದಾರೆ. ಈ ಮಧ್ಯೆ ಊರಿಗೆ ಬಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಂಜಿತ್ ಭಾರತೀಯ ಸೇನೆಗೆ ಆಯ್ಕೆಗೊಂಡಿ ರುವುದು ನಾಡಿಗೆ ಹೆಮ್ಮೆ ತಂದಿದೆ. ಅವರ ಪ್ರಯತ್ನ, ನಿಷ್ಠೆ, ಸಾಧನೆ ಪ್ರೇರಣಾದಾಯಕ.

ಅವರ ಸಾಧನೆ ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

You cannot copy contents of this page