ಕಲ್ಲಿಕೋಟೆ: ಬೆಲೆಯೇರಿಕೆ, ವಿದ್ಯುತ್ ದರ ಹೆಚ್ಚಳ ಮೊದಲಾದವುಗಳನ್ನು ಪ್ರತಿಭಟಿಸಿ ರಾಜ್ಯ ಸರಕಾರದ ವಿರುದ್ಧ ಮುಸ್ಲಿಂ ಲೀಗ್ ಪ್ರತ್ಯಕ್ಷ ಹೋರಾಟಕ್ಕೆ ನಿರ್ಧರಿಸಿದೆ. ಇದರಂಗವಾಗಿ ನಾಳೆ ಕೆಎಸ್‌ಇಬಿ ಕಚೇರಿಗಳ ಮುಂದೆ ಧರಣಿ ನಡೆಯಲಿದೆ. ಜನಪರ ವಿಷಯಗಳನ್ನು ಯುಡಿಎಫ್ ಮುಂದಿರಿಸಿಕೊಂಡು ಸರಕಾರದ ವಿರುದ್ಧ ಚಳವಳಿ ತೀವ್ರಗೊಳಿಸುವು ದಾಗಿ ಲೀಗ್ ನೇತಾರ ಕುಂಞಾಲಿಕುಟ್ಟಿ ತಿಳಿಸಿದ್ದಾರೆ.
