ಬೆಳ್ಳೂರಿನಲ್ಲಿ ರಾತ್ರಿ 7.45ರ ವರೆಗೆ ಮತದಾನ

ಬೆಳ್ಳೂರು: ಮತದಾನ ಕೊನೆಗೊಳ್ಳುವ ಸಮಯ ಸಂಜೆ 6 ಗಂಟೆ ವೇಳೆ ಬೆಳ್ಳೂರಿನಲ್ಲಿ ಮತದಾರರ ಭಾರೀ ಸರದಿ ಕಂಡುಬAದಿತ್ತು. ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿದ್ದ ಎರಡು ಮತಗಟ್ಟೆಗಳಲ್ಲೂ ಇದೇ ಸ್ಥಿತಿಯಿತ್ತು. 6 ಗಂಟೆ ವೇಳೆ ಸರದಿಯಲ್ಲಿ ಸುಮಾರು ತಲಾ 150 ಮಂದಿಯಿದ್ದು ಅವರಿಗೆಲ್ಲಾ ಟೋಕನ್ ನೀಡಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಇನ್ನು ಮತದಾನ ಕೊನೆ ಗೊಳ್ಳುವಾಗ ರಾತ್ರಿ7.45 ಆಗಿದೆ. ಆರಂಭದಲ್ಲಿ ಮತದಾನದಲ್ಲಿ ಉಂಟಾದ ನಿಧಾನವೇ ತಡವಾಗಲು ಕಾರಣವೆಂದು ಹೇಳಲಾಗುತ್ತಿದೆ.

You cannot copy contents of this page