ಬೆಸ್ತ  ಮೀನುಗಾರಿಕೆ ವೇಳೆ ಕುಸಿದು ಬಿದ್ದು ಸಾವು

ಕಾಸರಗೋಡು: ಮೀನುಗಾರಿಕೆ ವೇಳೆ  ದೋಣಿಯಲ್ಲಿ ಕುಸಿದುಬಿದ್ದು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದ ಬೆಸ್ತ ಚಿಕಿತ್ಸೆ ಫಲಕಾರಿ ಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ಕಸಬಾ ಕಡಪ್ಪುರದ ಆರ್. ಗಿರೀಶನ್ (42) ಸಾವನ್ನಪ್ಪಿದ ವ್ಯಕ್ತಿ. ಇವರು ಕೀಯೂರು ಕಡಪ್ಪುರದ ಕೆ. ಮಾಧವನ್ ಎಂಬವರ ಫೈಬರ್ ಬೋಟ್‌ನಲ್ಲಿ ಮೀನುಗಾರಿಕೆಗೆ ಈ ತಿಂಗಳ 14ರಂದು ಬೆಳಿಗ್ಗೆ   ಚೆಂಬರಿಕದಿಂದ ಸಮುದ್ರಕ್ಕಿಳಿದಿದ್ದರು. ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಅವರು ದೋಣಿಯಲ್ಲೇ ಕುಸಿದುಬಿದ್ದಿ ದ್ದಾರೆ. ತಕ್ಷಣ ಅವರನ್ನು ಇತರ ಬೆಸ್ತರು ಸೇರಿ ದಡಕ್ಕೆ ತಂದು ನಂತರ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗದೆ ನಿನ್ನೆ ಸಂಜೆ  ಸಾವನ್ನಪ್ಪಿದ್ದಾರೆ.

RELATED NEWS

You cannot copy contents of this page