ಬೇಕಲ ಗೋಕುಲಂ ಗೋಶಾಲೆಯಲ್ಲಿ 9 ದಿನಗಳ ವೈಶಾಖ ನಟನಂಗೆ ಚಾಲನೆ

ಕಾಸರಗೋಡು: ಭಾರತೀಯ ಕಲಾಪ್ರಾಕಾರಗಳು ಸಂಸ್ಕೃತಿಯ ಪ್ರತೀಕವಾಗಿದೆ. ಸಂಗೀತ, ನೃತ್ಯ ಮೊದಲಾದ ವಿಶಿಷ್ಟ ಕಲೆಗಳಿಗೆ ಪ್ರೋತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಗೋಕುಲಂ ಗೋಶಾಲೆಯ ನಿರಂತರ ಪ್ರಯತ್ನ ಶ್ಲಾಘನೀಯ ಎಂದು ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಅಡಿಗ ಅಭಿಪ್ರಾಯಪಟ್ಟರು.
ಬೇಕಲ ಗೋಕುಲಂ ಗೋಶಾಲೆ ಪರಂಪರಾ ವಿದ್ಯಾಪೀಠದಲ್ಲಿ ನಿನ್ನೆ ಸಂಜೆ 9 ದಿನಗಳ ನೃತೋತ್ಸವ `ವೈಶಾಕ ನಟನಂ ದೀಪಬೆಳಗಿಸಿ ಚಾಲನೆಯನ್ನು ನೀಡಿ ಅವರು ಮಾತನಾಡಿದರು. ಸಂಗೀತ, ನೃತ್ಯ, ಯಕ್ಷಗಾನ, ಭಜನೆ ಮೊದಲಾದವುಗಳಲ್ಲಿ ಮಕ್ಕಳನ್ನು ತೊಡಗಿಸಿಕೊಂಡಾಗ ಅದು ಮುಂದಿನ ತಲೆಮಾರಿಗೆ ವರ್ಗಾವಣೆಯಾಗುತ್ತದೆ. ಇಂತಹ ಕಲಾಪ್ರಾಕಾರಗಳನ್ನು ಉಳಿಸಿ ಕೊಳ್ಳುವಲ್ಲಿ ಹಿರಿಯರು ಮುತುವರ್ಜಿ ವಹಿಸಬೇಕು ಎಂದರು. ಗೋಶಾಲೆಯ ಪ್ರಧಾನ ವಿಷ್ಣುಪ್ರಸಾದ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಪೂರಕಳಿ ಅಕಾ ಡೆಮಿ ಅಧ್ಯಕ್ಷ ಕೆ.ಕುಂಞÂರಾಮನ್, ಸಂಗೀತಗಾರ ಟಿ.ಪಿ.ಶ್ರೀನಿವಾಸನ್, ಮೋರ್ಸಿಂಗ್ ವಾದಕ ಪಯ್ಯನ್ನೂರು ಗೋವಿಂದ ಪ್ರಸಾದ್, ಪಲ್ಲವ ನಾರಾ ಯಣನ್ ಶುಭಹಾರೈಸಿದರು. ವಿನೋದ್ ಕೃಷ್ಣನ್ ಸ್ವಾಗತಿಸಿ, ಡಾ.ನಾಗರತ್ನ ವಂದಿಸಿ ದರು. ನಂತರ ಗಾಯತ್ರಿ ರಾಜಾಜಿ ಚೆನ್ನೈ, ತೀರ್ಥ ಇ. ಪೊದುವಾಳ್, ವರ್ಷ ರಾಜ್ ಕುಮಾರ್ ಮತ್ತು ವೈಗಾ ಮನೋಜ್ ನೃತ್ಯ ಪ್ರದರ್ಶಿಸಿದರು.

RELATED NEWS

You cannot copy contents of this page