ಬೇಕೂರು ಸೇವಾಭಾರತಿ ಕಲಾವೃಂದ, ರಜತ ಮಹೋತ್ಸವ, ಕಟ್ಟಡ ಉದ್ಘಾಟನೆ

ಉಪ್ಪಳ: ಬೇಕೂರು ಸೇವಾಭಾರತಿ ಕಲಾವೃಂದ ಹಾಗೂ ಭಜನಾ ಮಂದಿರದ ರಜತ ಮಹೋತ್ಸವ ಹಾಗೂ ನೂತನ ಕಟ್ಟಡ ರಜತಾದ್ರಿಯ ಉದ್ಘಾಟನಾ ಸಮಾರಂಭ, ಸತ್ಯನಾರಾಯಣ ಪೂಜೆಯೊಂದಿಗೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು ಅಧ್ಯಕ್ಷತೆ ವಹಿಸಿದರು. ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ರಜತ ಸಂಭ್ರಮವನ್ನು ಉದ್ಘಾಟಿಸಿದರು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬಿನಾ ನೌಫಲ್, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟ, ಶಶಿಧರ ಶೆಟ್ಟಿ ಗ್ರಾಮಚಾವಡಿ, ಇಂಜಿನಿಯರ್ ಕಿರಣ್ ಕುಮಾರ್ ತಲಪಾಡಿ, ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ, ಪಂಚಾಯತ್ ಸದಸ್ಯರಾದ ಸುಜಾತ ಯು.ಶೆಟ್ಟಿ ಬೊಳ್ಳಾರು, ಸುಧಾಗಣೇಶ್, ಅಶ್ರಫ್ ಬೇಕೂರು, ಸುನಿಲ್ ವೈಶಾಕ್, ಮನ್ಮಥನ್ ತಂಬಿ, ಅಪುö್ಪ ಬೆಳ್ಚಾಡ, ಕಲಾವೃಂದದ ಗೌರವಾಧ್ಯಕ್ಷ ಕುಂಞÂರಾಮ ಕಾನ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಮಲ ಅಗರ್ತಿಮೂಲೆ, ಮಹಮ್ಮದ್ ಹಾಜಿ ಬೇಕೂರು ಇವರನ್ನು ಸನ್ಮಾನಿಸಲಾಯಿತು. ಮಾಧವ ಆಚಾರ್ಯ ಸ್ವಾಗತಿಸಿ, ಕಲಾವೃಂದದ ಅಧ್ಯಕ್ಷ ರಾಜೇಶ್ ಬೇಕೂರು ವಂದಿಸಿದರು. ಗಂಗಾಧರ ಕೊಂಡೆವೂರು, ದಿನಕರ ಹೊಸಂಗಡಿ ನಿರೂಪಿಸಿದರು. ಶ್ರಾವ್ಯ, ಮೋನಿಶ ಪ್ರಾರ್ಥನೆ ಹಾಡಿದರು. ಸಾಂಸ್ಕöÈತಿಕ ಕಾರ್ಯಕ್ರಮದಂಗವಾಗಿ ರಾತ್ರಿ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿದ್ಯ, ಶಾರದಾ ಆರ್ಟ್್ಸ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಇವರಿಂದ ನಾಟಕ ಪ್ರದರ್ಶನಗೊಂಡಿತು.

RELATED NEWS

You cannot copy contents of this page