ಬೇಳ ರತ್ನಗಿರಿ ಕ್ಷೇತ್ರ ಕಳವು: ಗಂಟೆಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಆರೋಪಿ ಬಂಧನ

ನೀರ್ಚಾಲು: ಬೇಳ ರತ್ನಗಿರಿ ಯಲ್ಲಿರುವ ಕ್ಷೇತ್ರದಿಂದ ಗಂಟೆಗಳನ್ನು ಕಳವು ನಡೆಸಿದ ಆರೋಪಿಯನ್ನು ಬದಿ ಯಡ್ಕ ಪೊಲೀಸರು ಸೆರೆಹಿಡಿದಿದ್ದಾರೆ.

ಮೆಣಸಿನಪಾರೆ ನಿವಾಸಿ ಸತೀಶ ಯಾನೆ ದೀಪಕ್ (40) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಕ್ಷೇತ್ರದಿಂದ ಕಳವುಗೈದ ಎಂಟು ಗಂಟೆ ಗಳನ್ನು ಈತ ಬದಿಯಡ್ಕದ ಗುಜರಿ ಅಂಗಡಿಯಲ್ಲಿ  ಮೊನ್ನೆ ಸಂಜೆ ಮಾರಾ ಟಕ್ಕೆ ಯತ್ನಿಸಿದ್ದನು. ಗಂಟೆಗಳನ್ನು ನೋ ಡಿದಾಗ ಸಂಶಯಗೊಂಡ   ಅಂಗಡಿ ಮಾಲಕ ಈ ವಿಷಯವನ್ನು ಕೂಡಲೇ ಪೊಲೀಸರಿಗೆ ತಿಳಿಸಿದ್ದರು. ಇದರಂತೆ ತಕ್ಷಣ  ಅಂಗಡಿಗೆ ತಲುಪಿದ ಪೊಲೀ ಸರು ಸತೀಶನನ್ನು ಸೆರೆಹಿಡಿದಿದ್ದಾರೆ. ಬಳಿಕ ನಡೆಸಿದ ತನಿಖೆ ವೇಳೆ ಕ್ಷೇತ್ರ ದಿಂದ ಕಳವುಗೈದ ಬಗ್ಗೆ ಈತ ಒಪ್ಪಿಕೊಂ ಡಿದ್ದಾನೆನ್ನಲಾಗಿದೆ. ಬೇಳ ರತ್ನಗಿರಿಯ ಶ್ರೀ ಕುದ್ರೆಕ್ಕಾಳಿ ಅಮ್ಮ ಕ್ಷೇತ್ರದ ಮುಂದೆ ನೇತಾಡಿಸಿದ್ದ ಎಂಟು ಗಂಟೆಗಳನ್ನು ಆರೋಪಿ ಕಳವು ನಡೆಸಿದ್ದನು. 

ಶನಿವಾರ ಬೆಳಿಗ್ಗೆ ಕ್ಷೇತ್ರಕ್ಕೆ ತಲುಪಿದ ವರಿಗೆ ಗಂಟೆಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕ್ಷೇತ್ರದ ಆಡಳಿತ ಸಮಿತಿ ಜತೆ ಕಾರ್ಯದರ್ಶಿ ಉದಯಕೃಷ್ಣ ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು.

ಕುದ್ರೆಕ್ಕಾಳಿಅಮ್ಮ ಕ್ಷೇತ್ರದ ಮುಂ ಭಾಗ ತೂಗಿ ಹಾಕಿದ್ದ ನಾಲ್ಕು ಗಂಟೆಗಳು, ಕ್ಷೇತ್ರದ ತೆಂಕುಭಾಗ ದಲ್ಲಿರುವ ಶ್ರೀ ವಿಷ್ಣುಮೂರ್ತಿ, ರಕ್ತಚಾಮುಂಡಿ ಉಪ ಕ್ಷೇತ್ರದಲ್ಲಿದ್ದ ನಾಲ್ಕು ಗಂಟೆಗಳು ಕಳವಿ ಗೀಡಾಗಿದ್ದವು. ಇವುಗಳಿಗೆ ಸುಮಾರು 16 ಸಾವಿರ  ಮೌಲ್ಯ ಅಂದಾಜಿಸಲಾಗಿದೆ. ಇವು ಕಳವಿಗೀಡಾದ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕೇಸು ದಾಖ ಲಿಸಿ ತನಿಖೆ ನಡೆಸುತ್ತಿದ್ದಂತೆ ಆರೋಪಿ ಅವುಗಳನ್ನು ಮಾರಾಟಗೈಯ್ಯಲು ಯತ್ನಿಸಿದ್ದನು.  ಸೆರೆಗೀಡಾದ ಆರೋಪಿಗೆ ಕಾಸರಗೋಡು ನ್ಯಾಯಾಲಯ ರಿಮಾಂಡ್  ವಿಧಿಸಿದೆ. ಇದೇ ವೇಳೆ ಆರೋಪಿ ಸತೀಶ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಇತರ ಮೂರು ಕಳವು ಪ್ರಕರಣಗಳಲ್ಲೂ  ಆರೋಪಿ ಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಮನೆಯೊಂದರ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವು, ಗೋಡೌನ್‌ನಿಂದ ಅಡಿಕೆ ಕಳವು, ಅಂಗನವಾಡಿಯಿಂದ ಮಕ್ಕಳ  ಪೋಷಕಾಹಾರ ಕಳವುಗೈದ ಪ್ರಕರಣಗಳಲ್ಲಿ  ಈತ ಆರೋಪಿ ಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page