ಬೇಸಿಗೆ ಬೇಗೆ: ಬೇಡಿಕೆ ಹೆಚ್ಚಿಸಿಕೊಂಡ ಸೀಯಾಳ: ಬೆಲೆಯಲ್ಲೂ ಏರಿಕೆ

ಕಾಸರಗೋಡು: ಬೇಸಿಗೆ ಕಾಲದ ಉಷ್ಣತೆಯಿಂದ ಪಾರಾಗಲು ಜನರು ವಿವಿಧ ರೀತಿಯ ಪಾನೀಯಗಳನ್ನು ಸೇವಿಸುತ್ತಿದ್ದಾರೆ. ತಂಪು ಪಾನೀಯ ಗಳೂ  ಜನರನ್ನು ಆಕರ್ಶಿಸುತ್ತಿರುವುದು ಕಂಡುಬರುತ್ತಿದೆ.  ಅದರ ಜೊತೆಗೆ ಶುದ್ಧವಾದ ಸೀಯಾಳ ನೀರನ್ನು ಕುಡಿಯಲು ಹೆಚ್ಚಿನವರು ಮುಂದಾಗುತ್ತಿದ್ದು ಇದರಿಂದ ಸೀಯಾಳಕ್ಕೆ ಬೇಡಿಕೆ ಹೆಚ್ಚಿದೆ. ಬೇಡಿಕೆ ಹೆಚ್ಚಿದಂತೆ  ಬೆಲೆಯೇರಿಕೆ ಕಂಡುಬರುತ್ತಿದೆ. ಇತ್ತೀಚೆಗೆವರೆಗೆ 45ರಿಂದ 50 ರೂ. ವರೆಗಿದ್ದ ಸೀಯಾಳಕ್ಕೆ ಇದೀಗ ಕೆಲವೆಡೆ 55ರಿಂದ 60ರೂಪಾಯಿ ಪಡೆಯು ವವರಾಗಿದ್ದಾರೆ.

ತೆಂಗಿನಕಾಯಿಗೆ ಬೆಲೆಯೆರಿಕೆ ಯಾಗಿದ್ದು ಅದರ ಫಲವಾಗಿ ಸೀ ಯಾಳದ ಬೆಲೆಯೇರಿಕೆಯಾಗಿದೆ ಯೆಂದು ಹೇಳಲಾಗುತ್ತಿದೆ. ಆದರೆ ಇದೀಗ ಸೀಯಾಳಕ್ಕೆ ಬೆಲೆಯೇರಿಕೆ ಯಾಗಲು ಉಷ್ಣತೆಯ ಪ್ರಭಾವ ಹಾಗೂ ಬೇಡಿಕೆಯಾಗಿದೆಯೆಂದು ವ್ಯಾಪಾರಿಗಳು ತಿಳಿಸುತ್ತಿದ್ದಾರೆ. ಇದೇ ವೇಳೆ ಅಗತ್ಯದಷ್ಟು  ಸೀಯಾಳ ಇಲ್ಲಿ ಉತ್ಪಾದನೆಯಾಗುತ್ತಿಲ್ಲ. ತಮಿಳುನಾಡು ಸಹಿತ ಹೊರ ರಾಜ್ಯಗಳಿಂದ ಸೀಯಾಳ ತರಬೇಕಾಗುತ್ತದೆ. ಅದಕ್ಕೆ ಹೆಚ್ಚಿನ ಬೆಲೆ  ನೀಡಬೇಕಾಗುತ್ತಿದೆಯೆಂದೂ ವ್ಯಾಪಾರಿಗಳು ತಿಳಿಸುತ್ತಿದ್ದಾರೆ.  ಪ್ರಸ್ತುತ ತಮಿಳುನಾಡಿನಿಂದ ಕಾಸರಗೋಡಿನ ವಿವಿಧೆಡೆಗೆ ಸೀಯಾಳ ತರಲಾಗುತ್ತಿದೆ. ದಿನಂಪ್ರತಿ ಹಲವು ಲಾರಿಗಳಲ್ಲಿ ಸೀಯಾಳ ಮುಂಜಾನೆ ವೇಳೆಯೇ ಜಿಲ್ಲೆಯ ರಖಂ ಮಾರಾಟಗಾರರಿಗೆ ತಲುಪುತ್ತಿದೆ. 10 ಗಂಟೆಯೊಳಗೆ ವಿವಿಧೆಡೆಗಳ ಚಿಲ್ಲರೆ ವ್ಯಾಪಾರಿಗಳಿಗೆ ಅದು ವಿತರಣೆಯಾಗುತ್ತಿದೆ.  ಈ ಹಿಂದೆ ಕರ್ನಾಟಕದಿಂದ ಇಲ್ಲಿಗೆ ಸೀಯಾಳ ತರಲಾಗುತ್ತಿತ್ತು.  ಆದರೆ ಅಲ್ಲಿಂದ ಸೀಯಾಳ ಸಾಗಾಟ ಕಡಿಮೆ ಯಾಗಿರುವುದರಿಂದ ತಮಿಳುನಾಡಿನ ಸೀಯಾಳವನ್ನು ಆಶ್ರಯಿಸ ಬೇಕಾಗಿದೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೆಚ್ಚಿನ ಪ್ರಮಾಣದ ಸೀಯಾಳ ಸಾಗಾಟವಾಗುತ್ತಿರುವುದೇ ಕೇರಳಕ್ಕೆ ಸಾಗಾಟ ಕಡಿಮೆಯಾಗಲು ಕಾರಣವಾಗಿದೆ.

ಇದೇ ವೇಳೆ ಅತೀ ಹೆಚ್ಚು ತೆಂಗಿನಕಾಯಿ ಬೆಳೆಯುವ ರಾಜ್ಯದಲ್ಲಿ ಸೀಯಾಳಕ್ಕೆ  ಕ್ಷಾಮ ಎದು ರಾಗಿರುವುದು ಆಶ್ಚರ್ಯದ ಸಂಗತಿಯಾಗಿದೆಯೆಂದು ವ್ಯಾಪಾರಿ ಗಳು ತಿಳಿಸುತ್ತಿದ್ದಾರೆ.

You cannot copy contents of this page