ಕಾಸರಗೋಡು: ಬೈಕ್ ಕಳವು ಪ್ರಕರಣದಲ್ಲ್ಲಿ ಆರೋಪಿಗಳಾದ ಇಬ್ಬರನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ತೆಕ್ಕಿಲ್ ವಿಲ್ಲೇಜ್ ಕೋಳಿಯಡ್ಕ ಲಕ್ಷಂವೀಡ್ ನಿವಾಸಿಗಳಾದ ಅಬ್ದುಲ್ ಬಾಸಿತ್ (22), ಮುಹಮ್ಮದ್ ಅಪ್ಸಲ್ (22) ಎಂಬಿವರನ್ನು ವಿದ್ಯಾನಗರದಿಂದ ಬಂಧಿಸಲಾಗಿದೆ.
ಉಪ್ಪಳ ನಿವಾಸಿ ಮುಹಮ್ಮದ್ ಹಮೀದ್ ಎಂಬವರ ಬೈಕ್ ಇತ್ತೀಚೆಗೆ ಕಳವಿಗೀಡಾಗಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಕೇಸು ದಾಖಲಿಸಿಕೊಂಡ ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದರು. ವಿವಿಧೆಡೆಗಳಲ್ಲಿರುವ ನೂರರಷ್ಟು ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಸಂಗ್ರಹಿಸಿ ಪೊಲೀಸರು ಪರಿಶೀಲನೆ ನಡೆಸಿದಾಗ ಆರೋಪಿಗಳ ಕುರಿತಾಗಿ ಮಾಹಿತಿ ಲಭಿಸಿತ್ತು. ಆರೋಪಿಗಳಿಗಾಗಿ ಶೋಧ ನಡೆಸುತ್ತಿರುವಾಗಲೇ ವಿದ್ಯಾನಗರದಲ್ಲಿರುವುದಾಗಿ ಸೂಚನೆ ಲಭಿಸಿದೆ. ಇದರಂತೆ ಪೊಲೀಸರು ನಡೆಸಿದ ಅತೀ ಸಾಹಸಿಕ ಕಾರ್ಯಾಚ ರಣೆಯಲ್ಲಿ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ. ಕಾಸರಗೋಡು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್, ಮಂಜೇಶ್ವರ ಇನ್‌ಸ್ಪೆಕ್ಟರ್ ಅನೂಪ್ ಕುಮಾರ್, ಎಸ್‌ಐಗಳಾದ ರತೀಶ್‌ಗೋಪಿ, ಸುಮೇಶ್‌ರಾಜ್, ಸಿಪಿಒ ಅಬ್ದುಸಲಾಂ ಪಿ.ಎಂ, ಸಿ.ಎಚ್. ಭಕ್ತಶೈವನ್, ಸಂದೀಪ್ ಎಂ, ಕೆ.ಎಂ. ಅನೀಶ್ ಕುಮಾರ್ ಎಂಬಿವರು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ. ಕಳವು ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪರ ನಿರ್ದೇಶ ಪ್ರಕಾರ ಪ್ರತ್ಯೇಕ ತಂಡವನ್ನು ನೇಮಿಸಲಾಗಿದೆ.