ಕಣ್ಣೂರು: ಬೈಕ್‌ಗಳು ಪರಸ್ಪರ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕೂತುಪರಂಬ ನೆರುವಳ್ಳಿ ತಿರುವಿನಲ್ಲಿ ಇಂದು ಮುಂಜಾನೆ ೧೨.೩೦ರ ವೇಳೆ ಅಪಘಾತ ಸಂಭವಿಸಿದೆ. ಎರಡು ಭಾಗದಿಂದ ಆಗಮಿಸಿದ ಬೈಕ್‌ಗಳು ಪರಸ್ಪರ ಢಿಕ್ಕಿ ಹೊಡೆದಿವೆ. ಕೆಲವು ದಿನಗಳ ಹಿಂದೆಯಷ್ಟೇ ಗಲ್ಫ್‌ನಿಂದ ಬಂದ ಪಾನೂರು, ಪುತ್ತೂರು, ಓವ್‌ಪಾಲಂ, ಕಣ್ಣಂಗೋಡ್‌ನ ತಾಹ (೨೬), ಕೂತುಪರಂಬ ಪೇಟುಮ್ಮಲ್‌ನ ಮುಹಮ್ಮದ್ ಸಿನಾನ್ (೧೯) ಎಂಬಿವರು ಮೃತಪಟ್ಟ ವ್ಯಕ್ತಿಗಳಾಗಿದ್ದಾರೆ. ಗಂಭೀರ ಗಾಯಗೊಂಡ ಈ ಇಬ್ಬರನ್ನು ಕೂಡಲೇ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
