ಬೈಕ್‌ನಲ್ಲಿ ಬಂದ ತಂಡ ಮಹಿಳೆಯ ನಕಲಿ ಚಿನ್ನದ ಸರ ಎಗರಿಸಿ ಪರಾರಿ
ಕಾಸರಗೋಡು: ದೇವಸ್ಥಾನಕ್ಕೆ ಗುಡಿಸಲೆಂದು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಬೈಕ್‌ನಲ್ಲಿ ಬಂದ ಮೂವರ ತಂಡ ಸರ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.
ನೀಲೇಶ್ವರ ಪಡಿಞ್ಞಾಟಂ ಕೊರುವಯಲ್ ನಾಗಚ್ಚೇರಿ ಭಗವತೀ ಕ್ಷೇತ್ರದಲ್ಲಿ ಗಡಿಸುವ ಕೆಲಸಕ್ಕಾಗಿ ಹೋಗುತ್ತಿದ್ದ ನೀಲೇಶ್ವರ ಉಚ್ಚುಳಿಕುದಿರಿನ ನಾರಾಯಣಿ ಎಂಬವರು ನಿನ್ನೆ ಮುಂಜಾನೆ ನಡೆದುಕೊಂಡು ಹೋಗುತ್ತಿದ್ದ ದಾರಿ ಮಧ್ಯೆ ದೇವಸ್ಥಾನದ ಬಳಿಯಲ್ಲೇ ಎದುರುಗಡೆಯಿಂದ ಬೈಕ್‌ನಲ್ಲಿ ಬಂದ ಮೂರು ಮಂದಿಯ ತಂಡ ಸರ ಎಗರಿಸಿದೆ.
ಆದರೆ ನಾರಾಯಣಿಯವರು ಧರಿಸಿದ್ದು ನಕಲಿ ಸರವಾಗಿತ್ತು. ಅದರಿಂದಾಗಿ ಚಿನ್ನ ಎಗರಿಸಿದ ತಂಡದವರಿಗೆ ಇಂಗು ತಿಂದ ಮಂಗನ ಸ್ಥಿತಿ ಉಂಟಾಯಿತು. ಆದರೂ ನೀಲೇಶ್ವರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದರು. ಪರಿಸರದ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸತೊಡಗಿದ್ದು, ಅದರ ಜಾಡು ಹಿಡಿದು ಕಳ್ಳರ ಪತ್ತೆಗಾಗಿರುವ ಯತ್ನ ಆರಂಭಿಸಲಾಗಿದೆ.