ಬ್ಯಾಂಕ್ ನೌಕರೆ ನೇಣು ಬಿಗಿದು ಸಾವು
ಹೊಸದುರ್ಗ: ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ಬ್ಯಾಂಕ್ ನೌಕರೆ ಬೆಡ್ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪಯ್ಯನ್ನೂರು ಕೇಳೋತ್ತ್ನ ಸಂಗೀತ್ ಎಂಬವರ ಪತ್ನಿ ಶ್ರುತಿ (೨೮) ಮೃತ ಯುವತಿ. ನಿನ್ನೆ ರಾತ್ರಿ ಆಹಾರ ಸೇವಿಸಿದ ಬಳಿಕ ಮನೆಯ ಮೇಲಂತಸ್ತಿನ ಬೆಡ್ರೂಂನಲ್ಲಿ ಈಕೆ ನಿದ್ರಿಸಿದ್ದಳು. ರಾತ್ರಿ ೧೨ ಗಂಟೆಗೆ ಎಚ್ಚರಗೊಂಡಾಗ ಪತ್ನಿ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಪತಿ ಮನೆಯವರಲ್ಲಿ ತಿಳಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.