ಬ್ಯಾಂಕ್‌ಗೆ ಪಾವತಿಸಲು ತಂದ ಹಣದಲ್ಲಿ 500 ರೂ. ಮುಖಬೆಲೆಯ ಐದು ಖೋಟಾನೋಟು ಪತ್ತೆ
ಕಾಸರಗೋಡು: ಬ್ಯಾಂಕ್‌ಗೆ ಪಾವತಿಸಿದ ಹಣದಲ್ಲಿ 500 ರೂ. ಮುಖಬೆಲೆಯ ಐದು ಖೋಟಾನೋಟುಗಳು ಪತ್ತೆಯಾದ ಬಗ್ಗೆ ಕಾಸರ ಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಬ್ಯಾಂಕ್ ಆಫ್ ಇಂಡಿಯಾದ ಕಾಸರಗೋಡು ಎಂ.ಜಿ. ರಸ್ತೆ ಶಾಖೆಯ ಮೆನೇಜರ್ ಲತಿಕಾ ಎ. ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವ್ಯಾಪಾರ ಸಂಸ್ಥೆಯೊಂದರ ಹೆಸರಲ್ಲಿರುವ ಬ್ಯಾಂಕ್ ಖಾತೆಗೆ ಇ.ಕೆ. ಮುನಾವಿರ್ ಎಂಬವರು ಪಾವತಿಸಲು ತಂದ ೩,೫೪,೨೦೦ ರೂ.ಗಳ ನೋಟಿನ ಕಂತೆಯಲ್ಲಿ ೫೦೦ ರೂ. ಮುಖಬೆಲೆಯ ಐದು ಖೋಟಾನೋಟುಗಳು ಪತ್ತೆಯಾಗಿವೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮ್ಯಾನೇಜರ್ ತಿಳಿಸಿದ್ದಾರೆ. ಅದರಂತೆ ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ.