ಭಯೋತ್ಪಾದಕ ದಾಳಿ: ಮಂಜೇಶ್ವರದಲ್ಲಿ ಬ್ಲೋಕ್ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ

ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಸಮಿತಿ ವತಿಯಿಂ ದ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಮೃತಪಟ್ಟವರಿಗೆ   ಹೊಸಂಗಡಿ ಪೇಟೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಕೈಲಾಗದೆ ದಿವಾಳಿಯಾದ ಪಾಕಿಸ್ತಾನ ಸರಕಾರ ಕೂಲಿ ಸಿಪಾಯಿಗಳನ್ನು ತನ್ನ ಚಾಳಿ ಮುಂದುವರಿಸಿದ್ದು ಭಾರತದ ನಾಗರಿಕರ ಬಲಿದಾನಕ್ಕೆ ಪಾಕಿಸ್ತಾನ ಬೆಲೆ ತೆರಬೇಕಾದೀತು ಎಂದು ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಡಿಎಂಕೆ ನುಡಿದರು. ಪಕ್ಷದ ಚಂದ್ರಶೇಖರ ಶೆಟ್ಟಿ ಬೆಜ್ಜ, ಖಲೀಲ್ ಬಜಾಲ್, ಫಾರೂಕ್ ಶಿರಿಯ, ನಾಗೇಶ್ ಮಂಜೇಶ್ವರ, ಫ್ರಾನ್ಸಿಸ್ ಡಿ’ಸೋಜಾ, ಹನೀಫ್ ಪಡಿಂಞಾರ್, ಬಾಬು ಬಂದ್ಯೋಡು, ಗಣೇಶ್ ಪಾವೂರು, ವಸಂತರಾಜ್ ಶೆಟ್ಟಿ ಸಹಿತ ಹಲವರು ಭಾಗವಹಿಸಿದರು.

You cannot copy contents of this page