ಮಂಗಲ್ಪಾಡಿ ಪಂ.ನ ತ್ಯಾಜ್ಯ ಎಸೆಯುವವರ ಪತ್ತೆಗೆ ಕ್ಯಾಮರಾ ಸ್ಥಾಪನೆ ಖಾಸಗಿ ಹಿತ್ತಿಲಲ್ಲಿ: ಜನಪರ ವೇದಿಕೆಯಿಂದ ಆರೋಪ
ಮಂಗಲ್ಪಾಡಿ: ಪಂಚಾಯತ್ನಲ್ಲಿ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಪೇಕ್ಷಿಸುವವರನ್ನು ಪತ್ತೆಹಚ್ಚಲು ಸ್ಥಾಪಿಸಿರುವ ನಿರೀಕ್ಷಣಾ ಕ್ಯಾಮರಾವನ್ನು ಖಾಸಗಿ ವ್ಯಕ್ತಿಯ ಸ್ಥಳದಲ್ಲಿ ಸ್ಥಾಪಿಸಿರುವುದಕ್ಕೆ ಮಂಗಲ್ಪಾಡಿ ಜನಪರ ವೇದಿಕೆ ಪ್ರತಿಭಟಿಸಿದೆ. 2022-23ನೇ ವರ್ಷದ ಯೋಜನೆಯಲ್ಲಿ ಸೇರಿಸಿ ಕ್ಯಾಮರಾ ಸ್ಥಾಪಿಸಲು ತೀರ್ಮಾನಿ ಸಲಾಗಿತ್ತು. ಹತ್ತು ಲಕ್ಷದಷ್ಟು ರೂಪಾಯಿ ವೆಚ್ಚಮಾಡಿ ಏಳು ಕ್ಯಾಮರಾಗಳನ್ನು ವಿವಿಧ ವಾರ್ಡ್ಗಳಲ್ಲಿ ಸ್ಥಾಪಿಸಲಾಗಿದೆ. ಇದರಲ್ಲಿ ಕೆಲವು ಉಪ್ಪಳ ಪೇಟೆಯಲ್ಲಿ ಓರ್ವರ ಖಾಸಗಿ ಸ್ಥಳದಲ್ಲಿ ಸ್ಥಾಪಿಸಿರುವುದೆಂದು ಜನಪರ ವೇದಿಕೆ ಆರೋಪಿಸಿದೆ. ಈಮಧ್ಯೆ ಸ್ಥಾಪಿಸಿದ ಕ್ಯಾಮರಾಗಳು ಉಪಯೋU ಶೂನ್ಯವಾಗಿದ್ದು, ಇದನ್ನು ಸ್ಥಾಪಿಸಿದ ಬಳಿಕ ಕ್ಯಾಮರಾದ ಮೂಲಕ ಪತ್ತೆಹಚ್ಚಿ ಓರ್ವನನ್ನು ಕೂಡಾ ಸೆರೆಹಿಡಿಯ ಲಾಗಿಲ್ಲವೆಂದು ಮಾಹಿತಿ ಹಕ್ಕು ಕಾಯ್ದೆಯಂತೆ ಮನವಿ ನೀಡಿದಾಗ ತಿಳಿದುಬಂದಿದೆ. ಲಕ್ಷಾಂತರ ರೂ. ವೆಚ್ಚಮಾಡಿ ಕ್ಯಾಮರಾ ಸ್ಥಾಪಿಸಿ ಆ ಮೂಲಕ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಬೇಕಾಗಿದ್ದ ಯೋಜನೆ ಉಪಯೋಗ ಶೂನ್ಯ ವಾಗಿರುವುದು ಪಂಚಾಯತ್ನ ದಕ್ಷತೆಯನ್ನು ಸ್ಪಷ್ಟಪಡಿಸುತ್ತದೆ ಎಂದು ವೇದಿಕೆ ಆರೋಪಿಸಿದೆ. ತ್ಯಾಜ್ಯಮುಕ್ತ ಪಂಚಾಯತ್ಗೊಳಿಸುವ ನಿಧಿಯನ್ನು ದುಂದುವೆಚ್ಚ ಮಾಡುವ ಈ ರೀತಿಯ ಕ್ರಮಗಳಿಂದ ಆಡಳಿತ ಸಮಿತಿ, ಅಧಿಕಾರಿಗಳು ಹಿಂಜರಿಯಬೇಕೆಂದು ಜನಪರ ವೇದಿಕೆ ಆಗ್ರಹಿಸಿದೆ.