ಮಂಗಳೂರಿನಿಂದ ಕಾಸರಗೋಡು ಮೂಲಕ ರಾಮೇಶ್ವರಕ್ಕೆ ರೈಲು ಸೇವೆಗೆ ಹಸಿರು ನಿಶಾನೆ

ಕಾಸರಗೋಡು: ಮಂಗಳೂರಿನಿಂದ ಕಾಸರಗೋಡು ಮೂಲಕ ರಾಮೇಶ್ವರ  ತನಕದ ರೈಲು ಸೇವೆ ಆರಂಭಿಸಬೇಕೆಂಬ ಕಾಸರಗೋಡು ಸೇರಿದಂತೆ ಉತ್ತರ ಕೇರಳದ ಜನತೆಯ ದೀರ್ಘ ಕಾಲದ ಬೇಡಿಕೆಗೆ ಕೊನೆಗೂ ಅಂಗೀಕಾರ ಲಭಿಸಿದೆ.

ಇದರಂತೆ ಈ ರೈಲು ಸೇವೆ ಶೀಘ್ರ ಆರಂಭಗೊಳ್ಳಲಿದೆ. ಇದಕ್ಕೆ ರೈಲ್ವೇ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಮಂಗಳೂರಿನಿಂದ ಸೇವೆ ಆರಂಭಿಸುವ ಈ ರೈಲಿಗೆ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಶೊರ್ನೂರು, ಪಾಲ್ಘಾಟ್, ಪೊಳ್ಳಾಚಿ ಮತ್ತು ರಾಮನಾಥಪುರಂ ಎಂಬೆಡೆಗಳಲ್ಲಿ ನಿಲುಗಡೆ ನೀಡಲಾಗುವುದು. ಪ್ರತೀ ವಾರಕ್ಕೊಮ್ಮೆ ಈ ರೈಲು ಸೇವೆ ನಡೆಸಲು ಇದರಂತೆ ಶನಿವಾರದಂದು 7 ಗಂಟೆಗೆ ಮಂಗಳೂರಿನಿಂದ ಸೇವೆ ಪ್ರಯಾಣ ಆರಂಭಿಸುವ ಈ ರೈಲು ರವಿವಾರದಂದು ಬೆಳಿಗ್ಗೆ 11.45ಕ್ಕೆ ರಾಮೇಶ್ವರ ತಲುಪಲಿದೆ. ಬಳಿಕ ಅಂದು ಮಧ್ಯಾಹ್ನ ೨ ಗಂಟೆಗೆ ರಾಮೇಶ್ವರದಿಂದ ಮರು ಸೇವೆ ಆರಂಭಿಸುವ ಈ ರೈಲು ಸೋಮವಾರದಂದು ಬೆಳಿಗ್ಗೆ 5.50ಕ್ಕೆ ಮಂಗಳೂರು ರೈಲುನಿಲ್ದಾಣಕ್ಕೆ ಬಂದು ಸೇರುವ ರೀತಿಯಲ್ಲಿ ಸೇವಾ ಸಮಯ ಕ್ರಮೀಕರಿಸಲಾಗಿದೆ.

ಪಾಂಬನ್‌ನಲ್ಲಿ ರೈಲು ಸೇತುವೆ ನಿರ್ಮಾಣ ಕೆಲಸ ಈಗ ನಡೆಯುತ್ತಿದ್ದು, ಅದು ಪೂರ್ಣಗೊಂಡ ಬಳಿಕ ಈ ರೈಲು ಸೇವೆ ಆರಂಭಗೊಳ್ಳಲಿದೆ. 2023 ಜುಲೈ ತಿಂಗಳಲ್ಲೇ ಮಂಗಳೂರು- ರಾಮೇಶ್ವರ ರೈಲು ಸೇವೆಗೆ ಅನುಮತಿ ನೀಡಲಾಗಿತ್ತು.

ಆದರೆ ಪಾಂಬಲ್ ರೈಲ್ವೇ ಸೇತುವೆ ನಿರ್ಮಾಣ ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆ ವಿಳಂಬಗೊಂಡಿತ್ತು. ಈ ಸೇವೆಗಾಗಿ ರೈಲ್ವೇ ಲಿಮಿನಿಟೀಸ್ ಸಮಿತಿ ಅಧ್ಯಕ್ಷ ಪಿ.ಕೆ. ಕೃಷ್ಣದಾಸ್ ತೀವ್ರ ಯತ್ನ ನಡೆಸಿದ್ದರು.

Leave a Reply

Your email address will not be published. Required fields are marked *

You cannot copy content of this page