ಮಂಜಕ್ಕಲ್‌ನಲ್ಲಿ ಮಾದಕ ಪದಾರ್ಥ ಬೇಟೆ ಮಹಿಳೆಯರು, ಮಗು ಇದ್ದ ಕಾರಿನಿಂದ 100 ಗ್ರಾಂ ಎಂಡಿಎಂಎ ವಶ
ಬೋವಿಕ್ಕಾನ: ಇಲ್ಲಿಗೆ ಸಮೀಪದ ಮಂಜಕ್ಕಲ್‌ನಲ್ಲಿ ಭಾರೀ ಪ್ರಮಾಣದ ಮಾದಕ ಪದಾರ್ಥ ಬೇಟೆ ನಡೆದಿದೆ. ಕಾರಿನಲ್ಲಿ ಸಾಗಿಸುತ್ತಿದ್ದ 100 ಗ್ರಾಂ ಎಂಡಿಎಂಎಯನ್ನು ಪೊಲೀಸರು ಬೆನ್ನಟ್ಟಿ ವಶಪಡಿಸಿದ್ದಾರೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬೋವಿಕ್ಕಾನ- ಇರಿಯಣ್ಣಿ ರಸ್ತೆಯ ಮಂಜಕ್ಕಲ್‌ನಲ್ಲಿ ಇಂದು ಮುಂಜಾನೆ ೫.೪೫ಕ್ಕೆ ಆದೂರು ಎಸ್‌ಐ ವಿನೋದ್‌ರ ನೇತೃತ್ವದಲ್ಲಿ ಮಾದಕ ಪದಾರ್ಥ ವಶಪಡಿಸಲಾಗಿದೆ. ಎಂಡಿಎಂಎ ಸಹಿತ ತಲುಪಿದ ಕಾರನ್ನು ಪೊಲೀಸರು ಹಿಂಬಾಲಿಸುತ್ತಿದ್ದರು. ಬೋವಿಕ್ಕಾನಕ್ಕೆ ತಲುಪಿದಾಗ ಕಾರು ಇರಿಯಣ್ಣಿ ರಸ್ತೆಯಲ್ಲಿ ಸಂಚರಿಸಿದ್ದು, ಮಂಜಕ್ಕಲ್‌ಗೆ ತಲುಪುವಾಗ ಕಾರನ್ನು ತಡೆದು ಮಾದಕ ಪದಾರ್ಥವನ್ನು ವಶಪಡಿಸಿದ್ದಾರೆ. ಕಾರಿನಲ್ಲಿ ಪೊವ್ವಲ್ ಮಾಸ್ತಿಕುಂಡ್‌ನ ಸಹದ್ (26), ಕಾಸರಗೋಡು ಕೋಟೆಕಣಿಯ ಶಾನವಾಸ್ (20) ಹಾಗೂ ಈತನ ನಿಕಟ ಸಂಬಂಧಿಕರಾದ ಮಹಿಳೆಯರು ಹಾಗೂ ಒಂದು ಮಗು ಇದ್ದರೆನ್ನಲಾಗಿದೆ. ಇನ್ನಷ್ಟು ಮಾಹಿತಿಗಳು ಬಹಿರಂಗಗೊಳ್ಳಬೇಕಾಗಿದೆ.