ಮಂಜೇಶ್ವರ ಅಂಡರ್ ಪಾಸ್ ಬೇಡಿಕೆ ಹೋರಾಟ 100ನೇ ದಿನಕ್ಕೆ: ರಸ್ತೆಯಲ್ಲಿ ಉರುಳುಸೇವೆ ಪ್ರತಿಭಟನೆ

ಮಂಜೇಶ್ವರ: ಮಂಜೇಶ್ವರ ಜಂಕ್ಷನ್‌ನಲ್ಲಿ  ಅಂಡರ್ ಪಾಸ್‌ಗಾಗಿ ಮಂಜೇಶ್ವರದ ಜನತೆಯ ಬೇಡಿಕೆಗಳಿಗೆ ಸ್ಪಂದಿಸದ ಹೆದ್ದಾರಿ ಅಧಿಕಾರಿಗಳ, ಜನಪ್ರತಿನಿಧಿಗಳ ಅನಾಸ್ಥೆ ವಿರುದ್ಧ ನಡೆಸುತ್ತಿರುವ ಮುಷ್ಕರ ನಿನ್ನೆ 100ನೇ ದಿನಕ್ಕೆ ಕಾಲಿರಿಸಿದೆ. 100ನೇ ದಿನವಾದ ನಿನ್ನೆ  ವಿಶಿಷ್ಟ ಪ್ರತಿಭಟನೆ ನಡೆಸಲಾಯಿತು. ಹೆದ್ದಾರಿಯಲ್ಲಿ ನೂರಾರು ಕಾರ್ಯಕರ್ತರು  ಉರುಳುಸೇವೆ  ಪ್ರತಿಭಟನೆ ನಡೆಸಿದರು. ಇನ್ನೂ ಬೇಡಿಕೆಗೆ ಸ್ಪಂದಿಸದಿದ್ದರೆ ಪ್ರತಿಭಟನೆ ಕಾವು ತೀವ್ರಗೊಳಿಸುವುದಾಗಿ  ಪ್ರತಿಭಟನಾಕಾರರು ತಿಳಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಝಕರಿಯಾ ಮಂಜೇಶ್ವರ ನೇತೃತ್ವ ನೀಡಿದರು. ಮಾಡ ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಎಸ್.ಎಂ. ಬಶೀರ್ ಉದ್ಯಾವರ, ಆದರ್ಶ್ ಬಿ.ಎಂ., ಹಸೈನಾರ್, ಅಶ್ರಫ್ ಬಡಾಜೆ ಮಾತನಾಡಿದರು. ಹಸೈನಾರ್ ಮಂಜೇಶ್ವರ ಸ್ವಾಗತಿಸಿ, ವಂದಿಸಿದರು.

You cannot copy contents of this page