ಮಂಜೇಶ್ವರ: ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಷಷ್ಠಿ ಮಹೋತ್ಸವ ಇಂದು ಸಮಾಪ್ತಿಗೊಳ್ಳಲಿದೆ. ಇದರಂಗವಾಗಿ ನಿನ್ನೆ ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿ ಸಿದರು. ಇಂದು ಮಧ್ಯಾಹ್ನ 1.30ಕ್ಕೆ ಅವಭೃತ, 2.30ರಿಂದ ಮರದ ಲಾಲ್ಕಿಸಣ್ಣ ರಥೋತ್ಸವಗಳು, ಸಂಜೆ 5ಕ್ಕೆ ಶೇಷ ತೀರ್ಥ ಸ್ನಾನ, 6ಕ್ಕೆ ಧ್ವಜ ಅವರೋಹಣ, 7ಕ್ಕೆ ಗಡಿ ಪ್ರಸಾದ ವಿತರಣೆ, ರಾತ್ರಿ 9.30ಕ್ಕೆ ಮಹಾ ಪೂಜೆಯೊಂದಿಗೆ ಷಷ್ಠಿ ಮಹೋತ್ಸವ ಸಂಪನ್ನಗೊಳ್ಳಲಿದೆ.
