ಮಂಜೇಶ್ವರ ಪಂಚಾಯತ್‌ನ ನೂತನ ಕಾಂಪ್ಲೆಕ್ಸ್‌ಗೆ ಶಿಲಾನ್ಯಾಸ

ಮಂಜೇಶ್ವರ: ಮಂಜೇಶ್ವರ ಪಂಚಾಯತ್ ಆಡಳಿತ ಮಂಡಳಿ, ಸ್ಥಳೀಯರ ನಿರೀಕ್ಷೆಯಾಗಿದ್ದ ಪಂಚಾಯತ್ ಕಾಂಪ್ಲೆಕ್ಸ್‌ಗೆ ಶಂಕು ಸ್ಥಾಪನೆ ನಡೆಸಲಾಯಿತು. ಮೂರು ಅಂತಸ್ತಿನ ಕಟ್ಟಡವನ್ನು ಮಂಜೇಶ್ವರ ಮೀನು ಮಾರುಕಟ್ಟೆ ಬಳಿ ನಿರ್ಮಿಸಲಾಗುತ್ತಿದೆ. 1,30,86,923 ರೂ. ವೆಚ್ಚ ನಿರೀಕ್ಷಿಸಲಾಗಿದೆ. ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ ಶಿಲಾನ್ಯಾಸ ನೆರವೇರಿಸಿದರು. ಉಪಾಧ್ಯಕ್ಷ ಮುಹಮ್ಮದ್ ಸಿದ್ದಿಕ್, ಸದಸ್ಯರಾದ ಮುಮ್ತಾಸ್ ಸಮೀರ, ಯಾದವ ಬಡಾಜೆ, ರಾಧಾ, ಸುಪ್ರಿಯ, ಜಯಂತಿ, ರೇಖಾ, ಲಕ್ಷ್ಮಣ, ಕಾರ್ಯದರ್ಶಿ ಜೋರ್ಜ್ ಸಹಿತ ಹಲವರು ಉಪಸ್ಥಿತರಿದ್ದರು.

RELATED NEWS

You cannot copy contents of this page