ಮಂಜೇಶ್ವರ: ವಿಧಾನಸಭಾ ಮಂಡಲ ರಸ್ತೆಗಳ ನವೀಕರಣಕ್ಕೆ ಹಣ ಮಂಜೂರು
ಉಪ್ಪಳ: ಮಂಜೇಶ್ವರ ವಿಧಾನಸಭಾ ಮಂಡಲದ ವಿವಿಧ ಲೋಕೋಪಯೋಗಿ ರಸ್ತೆಗಳ ಪುನರುದ್ಧಾರಕ್ಕೆ, ದುರಸ್ತಿಗಾಗಿ ೮.೬೪ ಕೋಟಿ ರೂ.ಗಳನ್ನು ಮಂಜೂರು ಮಾಡಿರುವುದಾಗಿ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಪೈವಳಿಕೆ, ಮೀಂಜ ಪಂಚಾಯತ್ಗಳಿಂದ ಕರ್ನಾಟಕಕ್ಕೆ ತಲುಪುವ ಅತ್ಯಂತ ಶೋಚನೀಯಾವಸ್ಥೆಯಲ್ಲಿರುವ ಮಾಸ್ಕುಮೇರಿ-ಕುರುಡಪದವು ಅಂತಾರಾಜ್ಯ ರಸ್ತೆ ಪುನರುದ್ಧಾರಕ್ಕೆ ೪.೫೦ ಕೋಟಿ ರೂ., ಉಪ್ಪಳ-ಪತ್ವಾಡಿ ರಸ್ತೆ, ನಯಾಬಜಾರ್-ಕುದುಕೋಡಿ-ಸೋಂಕಾಲ್-ಪ್ರತಾಪನಗರ-ಅಂಬೇಡ್ಕರ್ ಕಾಲನಿ ರಸ್ತೆ, ಎನ್.ಎಚ್.ಶಾಲೆ-ಮುಳಿಂಜ ಟೆಂಪಲ್ ರಸ್ತೆ, ಹಿದಾಯತ್ನಗರ ಎನ್ಎಚ್ ಪಚ್ಲಂಪಾರೆ-ಉಪ್ಪಳ ಭಗವತಿ ಟೆಂಪಲ್ ರಸ್ತೆ, ಮೀಯಪದವು-ಚಿಗುರುಪಾದೆ ರಸ್ತೆ, ಬಂಗ್ರಮಂಜೇಶ್ವರ-ಕುಳೂರು ರಸ್ತೆ, ಕುಂಜತ್ತೂರು-ಕೆದುಂಬಾಡಿ-ನಂದರಪದವು ರಸ್ತೆ, ದುರ್ಗಿಪಳ್ಳ-ಬೆಜ್ಜ ಮುನ್ನಿಪ್ಪಾಡಿ ರಸ್ತೆ ಮೊದಲಾದ ರಸ್ತೆಗಳಿಗೆ ೬೪ ಲಕ್ಷ ರೂ.ಗಳಂತೆ ಯೂ,ಆರಿಕ್ಕಾಡಿ-ಪುತ್ತಿಗೆ, ಇಚ್ಲಂಪಾಡಿ-ನಾಯ್ಕಾಪು ರಸ್ತೆ, ಮುಳಿಗದ್ದೆ-ಬೆರಿಪದವು ರಸ್ತೆ, ಧರ್ಮತ್ತಡ್ಕ-ಕನ್ಯಾನ-ಬೆರಿಪದವು ರಸ್ತೆಗಳಿಗೆ ೭೦ ಲಕ್ಷ ರೂ.ನಂತೆಯೂ, ಅಡಕಳಕಟ್ಟೆ-ಸುಳ್ಯಮೆ, ಮಜೀರ್ಪಳ್ಳ-ಕೂಟತ್ತಜೆ ಸಹಿತ ವಿವಿಧ ರಸ್ತೆಗಳಿಗೆ ಒಂದು ಕೋಟಿ ರೂ., ಪೆರ್ಲ-ಪೂವನಡ್ಕ-ಅಡ್ಯನಡ್ಕ-ಬಾಕಿಲಪದವು, ಪೆರ್ಲ-ಕಾಟುಕುಕ್ಕೆ ಸಹಿತ ವಿವಿಧ ರಸ್ತೆಗಳಿಗೆ ೭೦ ಲಕ್ಷ ರೂ., ಪೆರ್ಲ-ಏತಡ್ಕ ರಸ್ತೆಗೆ ೨೦ ಲಕ್ಷ ರೂ, ಮುಗು-ಪಾಡಲಡ್ಕ ರಸ್ತೆಗೆ ೨೫ ಲಕ್ಷ ರೂ., ಸೀತಾಂಗೋಳಿ-ಪೆರ್ಲ ರಸ್ತೆಗೆ ೪೦ ಲಕ್ಷ ರೂ., ಕುಂಬಳೆ ಕಂಚಿಕಟ್ಟೆ-ನಾಯ್ಕಾಪು ರಸ್ತೆಗೆ ೩೦ ಲಕ್ಷ ರೂ. ಮಂಜೂರಾಗಿರುವುದಾಗಿ ಶಾಸಕರು ತಿಳಿಸಿದ್ದಾರೆ.