ಮತ್ತೆ ಚಿರತೆ ಪ್ರತ್ಯಕ್ಷ : ಜನತೆಗೆ ಹೆಚ್ಚಿದ ಆತಂಕ: ಆರ್ಆರ್ಟಿ ತಂಡದಿಂದ ಶೋಧ
ಮುಳ್ಳೇರಿಯ: ಮತ್ತೆ ಚಿರತೆ ಕಂಡು ಬಂದಿದೆ ಎಂದು ವದಂತಿಯಾದ ಪ್ರದೇಶಗಳಿಗೆ ಆರ್ಆರ್ಟಿ ತಂಡ ತಲುಪಿ ತಪಾಸಣೆ ನಡೆಸಿದೆ. ಆದರೆ ಚಿರತೆಯನ್ನು ಪತ್ತೆಹಚ್ಚಿದ ಬಗ್ಗೆ ತಿಳಿದು ಬಂದಿಲ್ಲ. ಕರ್ಮಂತೋಡಿಯಿಂದ ಟ್ಯೂನ್ ತರಗತಿ ಮುಗಿದು ಸಂಜೆ ಮನೆಗೆ ನಡೆದು ಹೋಗುತ್ತಿದ್ದ ಬಾಲಕಿಗೆ ಮೂರು ಚಿರತೆಗಳು ಕಂಡು ಬಂದ ಬಗ್ಗೆ ತಿಳಿಸಲಾಗಿದೆ. ಅದರಲ್ಲೊಂದು ದೊಡ್ಡದು ಹಾಗೂ ಮತ್ತೆರಡು ಮರಿಗಳೆಂದು ಹೇಳಲಾಗುತ್ತಿದೆ. ಇತ್ತೀಚೆಗೆ ಈ ವಿದ್ಯಾರ್ಥಿನಿಯ ತಾಯಿಯ ಎದುರಿಗೆ ಚಿರತೆ ಓಡಿ ಹೋಗಿತ್ತು. ಇದೇ ವೇಳೆ ಪೇರಡ್ಕ ಎಂಬಲ್ಲಿ ನಿನ್ನೆ ಮಧ್ಯಾಹ್ನ 12.30೦ಕ್ಕೆ ಚಿರತೆ ಕಂಡು ಬಂದಿದೆ. ಸ್ಕೂಟರ್ನಲ್ಲಿ ವ್ಯಕ್ತಿಯೊಬ್ಬರು ಸಂಚರಿಸುತ್ತಿದ್ದಾಗ ಚಿರತೆ ರಸ್ತೆಗೆ ಅಡ್ಡವಾಗಿ ಓಡಿದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರ್ಆರ್ಟಿ ತಂಡ ತಲುಪಿ ಶೋಧ ನಡೆಸಿದೆ. ಇದೇ ವೇಳೆ ಚಿರತೆ ಮತ್ತೆ ಕಾಣಿಸಿಕೊಂಡಿರುವುದರಿಂದ ಜನತೆ ಆತಂಕಕ್ಕೀಡಾಗಿದ್ದಾರೆ. ಶಾಲೆಗೆ ತೆರಳಲು ಕೂಡಾಮಕ್ಕಳು ಭಯ ಪಡುತ್ತಿರುವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ.