ಮದುವೆಗೆಂದು ತಿಳಿಸಿ ಹೋದ ಯುವತಿ ನಾಪತ್ತೆ

ಮಂಜೇಶ್ವರ: ಸ್ನೇಹಿತೆಯ ಮನೆಯಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಪೈವಳಿಕೆ ಆಚೆಕೆರೆಯ ಖದೀಜತ್ ಅಸ್ರೀನ (21) ಎಂಬಾಕೆ ನಾಪತ್ತೆಯಾಗಿದ್ದಾಳೆ. ನಿನ್ನೆ ಮಧ್ಯಾಹ್ನ ಈಕೆ ಮನೆಯಿಂದ ತೆರಳಿದ್ದು, ಅನಂ ತರ ಮರಳಿ ಬಂದಿಲ್ಲವೆನ್ನ ಲಾಗಿದೆ. ಈ ಬಗ್ಗೆ ಸಹೋದರ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page