ಮದ್ಯ ಸಹಿತ ಸೆರೆ: ಆರೋಪಿ, ಸ್ನೇಹಿತನಿಂದ ಅಬಕಾರಿ ಅಧಿಕಾರಿಗಳಿಗೆ ಹಲ್ಲೆ; ಓರ್ವ ಸೆರೆ, ಇನ್ನೋರ್ವ ಪರಾರಿ

ಕುಂಬಳೆ: ಅನಧಿಕೃತವಾಗಿ ಮದ್ಯ ಮಾರಾಟಗೈಯ್ಯುತ್ತಿದ್ದಾತನನ್ನು ಅಬಕಾರಿ ಅಧಿಕಾರಿಗಳು ಸೆರೆಹಿಡಿದಿದ್ದು, ಈ ವೇಳೆ ಆರೋಪಿ ಹಾಗೂ ಆತನ ಸ್ನೇಹಿತ ಸೇರಿ ಅಧಿಕಾರಿಗಳ ಮೇಲೆ ಆಕ್ರಮಿಸಿದ ಘಟನೆ ನಡೆದಿದೆ. ನಿನ್ನೆ ಸಂಜೆ ಕಯ್ಯಾರು ಬಳಿಯ ಪೆರ್ಮುದೆಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಕಯ್ಯಾರು ಪೆರಿಯಡ್ಕದ ಸಂದೇಶ್ ಪಿ (೨೧) ಎಂಬಾತನನ್ನು ಸೆರೆಹಿಡಿಯಲಾ ಗಿದೆ. ಈತನ ಸ್ನೇಹಿತ ಕಯ್ಯಾರಿನ ಕಿರಣ್ ಕುಮಾರ್ (೩೦) ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆಯೆಂದು  ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಪೆರ್ಮುದೆಯಲ್ಲಿ ಅನಧಿಕೃತವಾಗಿ ಕರ್ನಾಟಕ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ತಿಳಿದ ಕುಂಬಳೆ ರೇಂಜ್ ಅಬಕಾರಿ ಪ್ರಿವೆಂಟಿವ್ ಆಫೀಸರ್ ರಾಜೀವನ್, ಎಕ್ಸೈಸ್‌ನ ಐ.ಬಿ ಪ್ರಿವೆಂಟಿವ್ ಆಫೀಸರ್ ಶ್ರೀನಿವಾಸನ್, ಸಿವಿಲ್  ಎಕ್ಸೈಸ್ ಆಫೀಸರ್‌ಗಳಾದ ಶಿಜು ಕೆ, ರಂಜಿತ್ ಎಂಬಿವರು ನಿನ್ನೆ ಸಂಜೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಐದೂವರೆ ಲೀಟರ್ ಕರ್ನಾಟಕ ಮದ್ಯ ಸಹಿತ ಪೆರಿಯಡ್ಕದ ಸಂದೇಶ್‌ನನ್ನು ಸೆರೆಹಿಡಿಯಲಾಗಿದೆ. ಈ ವೇಳೆ ಅಲ್ಲಿಗೆ ಈತನ ಸ್ನೇಹಿತ   ಕಯ್ಯಾರಿನ ಕಿರಣ್ ಕುಮಾರ್ ಅಲ್ಲಿಗೆ ತಲುಪಿದ್ದಾನೆ. ಬಳಿಕ ಅವರಿಬ್ಬರು ಸೇರಿ ಅಬಕಾರಿ ಅಧಿಕಾರಿ ಗಳ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ್ದಾರೆ. ಕೂಡಲೇ ಅಧಿಕಾರಿಗಳು ಸಂದೇಶ್‌ನನ್ನು ಸೆರೆಹಿಡಿದಿದ್ದು, ಆದರೆ ಕಿರಣ್ ಕುಮಾರ್ ಓಡಿ ಪರಾರಿಯಾಗಿ ದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲ್ಲೆಯಿಂದ ಎಕ್ಸೈಸ್  ಐ.ಬಿ ಪ್ರಿವೆಂ ಟೀವ್ ಆಫೀಸರ್ ಶ್ರೀನಿವಾಸನ್ ಗಾಯಗೊಂಡಿದ್ದಾರೆ. ಅವರು ಕುಂಬಳೆ ಸಿಎಚ್‌ಸಿಯಲ್ಲಿ ಚಿಕಿತ್ಸೆ ಪಡೆದರು. ಘಟನೆ ಬಗ್ಗೆ ಅಬಕಾರಿ ಅಧಿಕಾರಿ ಶ್ರೀನಿವಾಸನ್ ನೀಡಿದ ದೂರಿನಂತೆ ಕಿರಣ್ ಕುಮಾರ್ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.

RELATED NEWS

You cannot copy contents of this page