ಮದ್ಯದ ಅಮಲಿನಲ್ಲಿ ಎಸ್‌ಐಗೆ ಹಲ್ಲೆಗೈದ ಯುವತಿ ಸೆರೆ

ಕಣ್ಣೂರು: ಮದ್ಯದ ಅಮಲಿನಲ್ಲಿ ಯುವತಿಯೋರ್ವೆ ಎಸ್‌ಐಗೆ ಹಲ್ಲೆಗೈದ ಘಟನೆ ನಡೆದಿದೆ. ಈ ಸಂಬಂಧ ತಲಶ್ಶೇರಿ ಕೂಳಿ ಬಜಾಸ್ ನಿವಾಸಿ ರಸೀನ ಎಂಬಾಕೆಯನ್ನು ಬಂಧಿಸಲಾಗಿದೆ. ಹಲವು ಪ್ರಕರಣಗಳಲ್ಲಿ ಈಕೆ ಆರೋಪಿಯಾಗಿದ್ದಾಳೆನ್ನಲಾಗಿದೆ.  ಈ ಹಿಂದೆಯೂ ಮದ್ಯದ ಅಮಲಿನಲ್ಲಿ ಈಕೆ ಗಲಾಟೆ ಸೃಷ್ಟಿಸಿದ್ದಳೆಂದೂ ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಮದ್ಯದ ಅಮಲಿನಲ್ಲಿ  ಸ್ನೇಹಿತನೊಂದಿಗೆ ತಲು ಪಿದ ರಸೀನ ನಾಗರಿಕರನ್ನು ಅಸಭ್ಯವಾಗಿ ನಿಂದಿಸಿದ್ದು, ಸ್ಥಳದಲ್ಲಿ ಭೀತಿಯ ವಾತಾ ವರಣ ಸೃಷ್ಟಿಸಿದ್ದಾಳೆ.  ವಿಷಯ ತಿಳಿದು ತಲಶ್ಶೇರಿ ಎಸ್‌ಐ ದೀಪ್ತಿಯ ನೇತೃತ್ವದಲ್ಲಿ ಪೊಲೀಸರು ತಲುಪಿದ್ದಾರೆ. ಯುವತಿಯನ್ನು ಹಿಂಜರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಕಸ್ಟಡಿಗೆ ವೈದ್ಯಕೀಯ ತಪಾಸಣೆಗಾಗಿ ಕೊಂಡೊ ಯ್ಯಲು ಜೀಪಿಗೆ ಹತ್ತಿಸಲಾಯಿತು.            ಪ್ರಯಾಣ ಮಧ್ಯೆ ಎಸ್‌ಐ ಮೇಲೆ ಆಕೆ ಹಲ್ಲೆ ಮಾಡಿದ್ದಾಳೆ.  ಬಳಿಕ ಆಕೆಯ ಬಂಧನ ದಾಖಲಿಸಿ ನ್ಯಾಯಾಲಯದಲ್ಲಿ ಹಾಜರುಪಡಿ ಸಲಾಯಿತು. ಈ ವೇಳೆ ಯುವತಿಗೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಮಾಹಿ ಹಾಗೂ ತಲಶ್ಶೇರಿಯಲ್ಲಿ ರಸೀನ ವಿರುದ್ಧ ಈ ಹಿಂದೆ ಕೇಸು ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page