ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ದಂಗವಾಗಿ ಶ್ರೀ ದೇವರಿಗೆ ಬ್ರಹ್ಮಕಲಶಾ ಭಿಷೇಕ, ಬ್ರಹ್ಮಕುಂಭಾಭಿಷೇಕ ನಿನ್ನೆ ಸಂಭ್ರಮದಿಂದ ಜರಗಿತು. ಇದೇ ವೇಳೆ ಶ್ರೀ ಮಹಾಗಣಪತಿ ದೇವರ ಮೂಡಪ್ಪ ಸೇವೆಗೂ ಚಾಲನೆ ನೀಡಲಾಯಿತು. ಮೂಡಪ್ಪ ಸೇವೆಯ ಪ್ರಾರ್ಥನೆ, ಧ್ವಜಾ ರೋಹಣ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಪೂಜೆ ನಡೆಯಿತು. ಎಪ್ರಿಲ್ ೫ರಂದು ಮಹಾ ಗಣಪತಿ ಮೂಡಪ್ಪ ಸೇವೆ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಧ್ವಜಾರೋಹಣ, ಬಲಿ ಉತ್ಸವ ನಡೆಯಿತು. ೫ರಂದು ಬೆಳಿಗ್ಗೆ ೫ಕ್ಕೆ ದೀಪ ಬಲಿ, ದರ್ಶನಬಲಿ, ಶತ ರುದ್ರಾಭಿಷೇಕ, ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾ ಮೂಡಪ್ಪಸೇವೆಯ ಅರಿಕೊಟ್ಟಿಗೆ ಮುಹೂರ್ತ, ಸಂಜೆ ೫ಕ್ಕೆ ಉತ್ಸವ ಬಲಿ, ಉಳಿಯತ್ತಡ್ಕಕ್ಕೆ ಶ್ರೀ ದೇವರ ಸವಾರಿ, ಬೆಡಿಕಟ್ಟೆಯಲ್ಲಿ ಸುಡುಮದ್ದು ಪ್ರದರ್ಶನ, 10ಕ್ಕೆ ಶ್ರೀ ಭೂತಬಲಿ, ಮಹಾ ಮೂಡಪ್ಪಾಧಿವಾಸ ಹೋಮ, 11 ಗಂಟೆಗೆ ದೇವರಿಗೆ ಮೂಡಪ್ಪ ಸಮರ್ಪಣೆ, ಕವಾಟ ಬಂಧನ, ೬ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಸಿದ್ಧಿವಿನಾಯಕ ದೇವರ ದಿವ್ಯದರ್ಶನ ನಡೆಯಲಿದೆ.
