ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ: ಮುಳಿಯಾರು ವಲಯ ಸಮಿತಿ ರೂಪೀಕರಣ

ಮುಳಿಯಾರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆಯ ಯಶಸ್ವಿಗಾಗಿ ಮುಳಿಯಾರು ವಲಯ ಸಮಿತಿ ರೂಪೀಕರಣ ಸಭೆ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯಿತು. ಜಯದೇವ ಖಂಡಿಗೆ ಮಾಹಿತಿ ನೀಡಿದರು. ಮಂಜುನಾಥ್ ಕಾಮತ್, ಗಿರೀಶ್, ರತನ್ ಕಾಮತ್, ರಾಮಯ್ಯ ಭಟ್, ಸುರೇಶ್ ನಾಯ್ಕ್, ಮುರಳಿ ಗಟ್ಟಿ, ಮುರಳಿ ಬಂದಡ್ಕ, ಯೋಗೀಶ್ ಮಧೂರ, ಜಗದೀಶ್ ಕೂಡ್ಲು ಮಾತನಾಡಿದರು. ಸೀತಾರಾಮ ಬಳ್ಳುಳ್ಳಾಯರನ್ನು ಗೌರವ ಅಧ್ಯಕ್ಷರನ್ನಾಗಿಯೂ, ಗೋವಿಂದ ಬಳ್ಳಮೂಲೆ ಅಧ್ಯಕ್ಷರಾಗಿಯೂ, ರಾಜನ್ ಮುಳಿಯಾರು ಪ್ರಧಾನ ಕಾರ್ಯದರ್ಶಿಯಾಗಿರುವ ಸಮಿತಿ ರೂಪೀಕರಿಸಲಾಯಿತು. ಸಭೆಯಲ್ಲಿ ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿದರು. ಗೋವಿಂದ ಬಳ್ಳಮೂಲೆ ಸ್ವಾಗತಿಸಿ, ರಾಜನ್ ಮುಳಿಯಾರು ವಂದಿಸಿದರು.

RELATED NEWS

You cannot copy contents of this page