ಮನೆ ಬಳಿ ನಿಲ್ಲಿಸಿದ್ದ ಇಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿ
ಉಪ್ಪಳ: ಇಲೆಕ್ಟಿçಕ್ ಸ್ಕೂಟರ್‌ಗೆ ಬೆಂಕಿ ತಗಲಿ ಉರಿದು ನಾಶಗೊಂಡ ಘಟನೆ ನಡೆದಿದೆ. ಉಪ್ಪಳ ಪೇಟೆಯ ಮೊಹಮ್ಮದ್ ನಾಸಿರ್ ಎಂಬವರ ಸ್ಕೂಟರ್ ಉರಿದಿದೆ. ಮನೆ ಬಳಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ನಿನ್ನೆ ರಾತ್ರಿ ಸುಮಾರು 9.30ರ ವೇಳೆ ಬೆಂಕಿ ತಗಲಿ ಉರಿದಿದೆ. ಸ್ಥಳಕ್ಕೆ ಉಪ್ಪಳ ಅಗ್ನಿಶಾಮಕ ದಳ ತಲುಪಿದ್ದು, ಅಷ್ಟರಲ್ಲಿ ಮನೆಯವರು ಬೆಂಕಿಯನ್ನು ನಂದಿಸಿದ್ದರು. ಶಾರ್ಟ್ಸರ್ಕ್ಯೂಟ್ ನಿಂದ ಬೆಂಕಿ ತಗಲಿರುವುದಾಗಿ ಅಂದಾಜಿಸಲಾಗಿದೆ.