ಮನೆ ಬಾಡಿಗೆಗೆ ಪಡೆದು ಮಾದಕವಸ್ತು ವ್ಯಾಪಾರ: ಇಬ್ಬರ ಬಂಧನ

ಬದಿಯಡ್ಕ: ಲೈಫ್ ವಸತಿ ಯೋಜನೆ ಪ್ರಕಾರ ಲಭಿಸಿದ ಮನೆಯನ್ನು ಬಾಡಿಗೆಗೆ ಪಡೆದು ಮಾದಕವಸ್ತು ಮಾರಾಟ ನಡೆಸುತ್ತಿದ್ದ ತಂಡದ ಇಬ್ಬರನ್ನು ಬದಿಯಡ್ಕ ಸಿಐ ಕೆ. ಸುಧೀರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ನೀರ್ಚಾಲ್‌ನ ಮುಹಮ್ಮದ್ ಆಸಿಫ್ (35), ಚೌಕಿ ಆಜಾದ್‌ನಗರದ ಮುಹಮ್ಮದ್ ಇಕ್ಭಾಲ್ (38) ಎಂಬಿವರನ್ನು ಬಂಧಿಸಲಾಗಿದೆ. ಇವರ ಕೈಯಿಂದ 26.100 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಸರಕಾರ ನೀಡಿದ ಸ್ಥಳದಲ್ಲಿ ಲೈಫ್ ವಸತಿ ಯೋಜನೆ ಪ್ರಕಾರ ನಿರ್ಮಿಸಿದ 5೦ ಮನೆಗಳ ಪೈಕಿ ಒಂದು ಮನೆಯನ್ನು  ಬಾಡಿಗೆಗೆ ಪಡೆದು ತಂಡ ಮಾದಕವಸ್ತು ವ್ಯವಹಾರ ನಡೆಸುತ್ತಿತ್ತೆನ್ನಲಾಗಿದೆ. ಈ ಬಗ್ಗೆ ಲಭಿಸಿದ ಮಾಹಿತಿಯ ಆಧಾರದಲ್ಲಿ ಮನೆಗೆ ದಾಳಿ ನಡೆಸಿದ ಪೊಲೀಸರು  ಬೆಡ್ ರೂಂ ತಪಾಸಣೆ ನಡೆಸಿದಾಗ  ಪ್ಯಾಕೆಟ್‌ಗಳಲ್ಲಿ ತುಂಬಿಸಿಟ್ಟ ಎಂಡಿಎಂಎ ಪತ್ತೆಯಾಗಿದೆ.

You cannot copy contents of this page