ಮನೆ ಹಿತ್ತಿಲಿನಿಂದ ಆಡು ಕಳವುಗೈದು ಸಾಗಾಟಸೆರೆಗೀಡಾದ ಇಬ್ಬರಿಗೆ ರಿಮಾಂಡ್ ಇನ್ನೋರ್ವನಿಗಾಗಿ ಶೋಧ
ಬದಿಯಡ್ಕ: ಕಾರಿನಲ್ಲಿ ತಲುಪಿ ಆಡುಗಳನ್ನು ಕಳವುಗೈದು ಸಾಗಿಸುತ್ತಿದ್ದ ಇಬ್ಬರನ್ನು ಬದಿಯ ಡ್ಕ ಪೊಲೀಸರು ಸೆರೆಹಿಡಿದಿದ್ದಾರೆ.
ನೀರ್ಚಾಲು ಮೂಕಂಪಾರೆ ನಿವಾಸಿಗಳಾದ ಮುಹಮ್ಮದ್ ಶಫೀಕ್ (29), ಈತನ ಸಹೋದರ ಇಬ್ರಾಹಿಂ ಖಲೀಲ್ (24) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರಿಗೆ ರಿಮಾಂಡ್ ವಿಧಿಸಲಾಗಿದೆ. ಈ ಕಳವು ತಂಡಕ್ಕೆ ಸೇರಿದ ಸಾಲೆತ್ತಡ್ಕ ನಿವಾಸಿ ಸಿದ್ದಿಕ್ (25) ಎಂಬಾತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಶನಿವಾರ ಬೆಳಿಗ್ಗೆ ನಿರ್ಚಾಲು ಬಳಿಯ ಪೂವಾಳೆ ಕ್ರಶರ್ ಸಮೀಪದ ಬಿ.ಎಂ. ಶರೀಫ್ ಎಂಬವರ ಮನೆ ಹಿತ್ತಿಲಿನಿಂದ ಮುಹಮ್ಮದ್ ಶಪೀಕ್ ಹಾಗೂ ಇಬ್ರಾಹಿಂ ಖಲೀಲ್ ಸೇರಿ ಆಡು ಕಳವುಗೈದು ಕಾರಿನಲ್ಲಿ ಸಾಗಿಸಲು ಯತ್ನಿಸಿದ್ದಾರೆ. ಇದು ನಾಗರಿಕರ ಅರಿವಿಗೆ ಬಂದಿದ್ದು ಅವರು ಕಳ್ಳರನ್ನು ಹಿಡಿದಿಟ್ಟು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಬಂಧಿತರನ್ನು ತನಿಖೆಗೊಳಪಡಿಸಿದಾಗ ಈ ಇಬ್ಬರು ಒಳಗೊಂಡ ತಂಡ ಹಲವೆಡೆ ಗಳಿಂದ ಆಡುಗಳನ್ನು ಕಳವು ನಡೆಸಿದೆ ಯೆಂದು ತಿಳಿದುಬಂದಿದೆ. ಕಳೆದೊಂದು ತಿಂಗಳಿಂದ ಚರ್ಲಡ್ಕ, ಅರ್ತಿಪಳ್ಳ, ನೀರ್ಚಾಲು ಎಂಬಿಡೆಗಳಿಂ ದಾಗಿ ೨೦ರಷ್ಟು ಆಡುಗಳನ್ನು ಈ ತಂಡ ಕಳವು ನಡೆಸಿರುವುದಾಗಿ ತಿಳಿದುಬಂದಿದೆ. ಅಲ್ಲದೆ ನೀರ್ಚಾಲು ನೂರುಲ್ ಇಸ್ಲಾಂ ಮದ್ರಸ ಸಮೀಪ ಹಾಗೂ ನೀರ್ಚಾಲು ಮಖಾಂ ಬಳಿಯಿಂದ, ಅರ್ತಿಪಳ್ಳ ಎಂಬಿಡೆ ಗಳಿಂದಲೂ ಒಂದೊಂದು ಆಡುಗಳನ್ನು ಕಳವುಗೈದಿರುವುದಾಗಿ ತಿಳಿದುಬಂದಿದೆ. ಗುಡ್ಡೆಯಲ್ಲಿ ಮೇಯುತ್ತಿರುವ ಆಡುಗಳಿಗೆ ಬಾಳೆಹಣ್ಣಿನ ಸಿಪ್ಪೆ ನೀಡಿ ಉಪಾಯದಿಂದ ಅವುಗಳನ್ನು ಹಿಡಿದು ವಾಹನದಲ್ಲಿ ಹತ್ತಿಸಿ ಸಾಗಿಸುವುದು ತಂಡದ ಕೃತ್ಯವೆನ್ನಲಾಗಿದೆ.
ಸೆರೆಗೀಡಾದ ತಂಡದಿಂದ ಹಿದಿನೈದು ಆಡುಗಳನ್ನು ಪತ್ತೆಹಚ್ಚಿ ಪೊಲೀಸ್ ಠಾಣೆಗೆ ತಲುಪಿಸಲಾಗಿದೆ. ನ್ಯಾಯಾಲಯ ಅನುಮತಿ ಲಭಿಸಿದ ಬಳಿಕ ಆಡುಗಳನ್ನು ವಾರಸುದಾರರಿಗೆ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಡು ಕಳವು ತಂಡ ಸೆರೆಗೀಡಾದ ವಿಷಯ ತಿಳಿದುಬರು ವುದರೊಂದಿಗೆ ಈ ಬಗ್ಗೆ 9 ದೂರುಗಳು ಪೊಲೀಸರಿಗೆ ಲಭಿಸಿದೆ. ತಲೆಮರೆಸಿಕೊಂಡ ಸಾಲೆತ್ತಡ್ಕದ ಸಿದ್ದಿಕ್ (25)ನನ್ನು ಪತ್ತೆಹಚ್ಚಿದರೆ ಇನ್ನಷ್ಟು ಆಡು ಕಳವು ಪ್ರಕರಣಗಳು ಬೆಳಕಿಗೆ ಬರಲಿದೆಯೆಂದು ಪೊಲೀ ಸರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನ ಪತ್ತೆಗಾಗಿ ಶೋಧ ಮುಂದುವರಿ ಸಲಾಗಿದೆ. ಆಡುಗಳು ನಾಪತ್ತೆಯಾದ ಬಗ್ಗೆ ದೂರುಗಳಿದ್ದರೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇ ಕೆಂದೂ ಅಧಿಕಾರಿಗಳು ತಿಳಿಸಿದ್ದಾರೆ.