ಮನೆಗೆ ಅತಿಕ್ರಮಿಸಿ ನುಗ್ಗಿ ನಿದ್ರಿಸುತ್ತಿದ್ದ ಯುವತಿಯ ಮಾನಭಂಗಕ್ಕೆತ್ನ : ಆರೋಪಿ ಬಂಧನ
ಕಾಸರಗೋಡು: ಮನೆಗೆ ಅತಿ ಕ್ರಮಿಸಿ ನುಗ್ಗಿ ಯುವತಿಯನ್ನು ಮಾನ ಭಂಗಗೈಯ್ಯಲು ಯುವಕನೋರ್ವ ಯತ್ನಿಸಿದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಕೇಸು ದಾಖಲಿ ಸಿಕೊಂಡ ಚಿಟ್ಟಾರಿ ಕಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಲಿನೇಶ್ (41) ಎಂಬಾತ ಸೆರೆಗೀಡಾದ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ದಿನ ಮುಂಜಾನೆ ೧.೩೦ರ ವೇಳೆ ಚಿಟ್ಟಾರಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮದ್ಯ ದಮಲಿನಲ್ಲಿದ್ದ ಲಿನೇಶ್ ಮನೆಗೆ ಅತಿಕ್ರಮಿಸಿ ನುಗ್ಗಿ ನಿದ್ರಿಸುತ್ತಿದ್ದ ೪೫ರ ಹರೆಯದ ಯುವತಿಯನ್ನು ಅಪ್ಪಿಕೊಂಡಿದ್ದಾನೆನ್ನಲಾಗಿದೆ.
ಈವೇಳೆ ಯುವತಿ ಬೊಬ್ಬೆ ಹಾಕಿದ್ದು ಅಷ್ಟರಲ್ಲಿ ಆರೋಪಿ ಓಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.