ಮನೆಗೆ ಸಿಡಿಲಿನಾಘಾತ: ವ್ಯಾಪಕ ನಾಶನಷ್ಟ

ಮಂಜೇಶ್ವರ: ಹೊಸಂಗಡಿಯಲ್ಲಿ ಸಿಡಿಲಿನ ಆಘಾತದಿಂದ ಮನೆ ಯೊಂದು ಹಾನಿಗೀಡಾಗಿದೆ. ಹೊಸಂ ಗಡಿ ಮಳ್‌ಹರ್ ಮುಂಭಾಗದಲ್ಲಿರುವ ಮುಹಮ್ಮದ್ ಬಿ.ಎಂ. ಯಾನೆ ಶಬೀರ್ ಎಂಬವರ ಮನೆಗೆ ನಿನ್ನೆ ಸಿಡಿಲು ಬಡಿದಿದೆ. ಇದರಿಂದ ಗೋಡೆ ಯ ಹಲವು ಭಾಗಗಳಲ್ಲಿ ಬಿರುಕುಂ ಟಾಗಿದೆ. ಅದೇ ರೀತಿ ಫ್ರಿಡ್ಜ್, ವಾಷಿಂ ಗ್ ಮೆಶಿನ್, ಮೋಟಾರ್, ಫ್ಯಾನ್, ಮಿಕ್ಸಿ ಮೊದಲಾದ ವಿದ್ಯುತ್ ಉಪಕರಣಗಳು, ವಯರಿಂಗ್ ನಾಶಗೊಂಡಿದೆ. ಇದರಿಂದ ಸುಮಾರು ಒಂದು ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ನಷ್ಟ ಅಂದಾಜಿಸಲಾಗಿದೆ ಎಂದು ತಿಳಿಸಲಾಗಿದೆ. ನಿನ್ನೆ ಅಪರಾಹ್ನ ಧಾರಾಕಾರ ಮಳೆ ಸುರಿಯುತ್ತಿದ್ದಂತೆ ಮನೆಗೆ ಸಿಡಿಲಿನ ಆಘಾತವುಂಟಾಗಿದೆ. ಈ ವೇಳೆ ಕುಟುಂಬ ಸದಸ್ಯರು ಒಂದೇ ಕೊಠಡಿಯಲ್ಲಿದ್ದುದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ.

You cannot copy contents of this page