ಮನೆಯಲ್ಲಿ ಬಚ್ಚಿಟ್ಟ 11.190 ಕಿಲೋ ಗಾಂಜಾ ವಶ; ಇಬ್ಬರಿಗಾಗಿ ಶೋಧ; ಎಂ.ಡಿ.ಎಂ.ಎ ಸಹಿತ ಓರ್ವ ಸೆರೆ

ಕಾಸರಗೋಡು: ಡಿಐಜಿಯವರ ನಿರ್ದೇಶ ಮೇರೆಗೆ ಪೊಲೀಸರು ನಿನ್ನೆ ನಡೆಸಿದ ಸ್ಪೆಷಲ್ ಡ್ರೈವ್‌ನಲ್ಲಿ 11.190 ಕಿಲೋ ಗಾಂಜಾ ವಶಪಡಿಸಲಾಗಿದೆ. ಉದುಮ ಪಂಚಾಯತ್‌ನ ಬಾರ ಮುಕ್ಕುನ್ನೋತ್ ಎಂಬಲ್ಲಿನ ಮನೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಗಾಂಜಾ ಪತ್ತೆಹಚ್ಚಲಾಗಿದೆ. ಘಟನೆಗೆ ಸಂಬಂಧಿಸಿ  ಮಂಗಳೂರು, ಉದುಮ ಹಾಗೂ ಮೇಲ್ಪರಂಬದಲ್ಲಿ  ಹೋಟೆಲ್ ನಡೆಸುವ ಉಸ್ಮಾನ್ ಎಂಬವರ ಮಕ್ಕಳಾದ ಮುಕ್ಕುನ್ನೋತ್ ಹೌಸ್‌ನ ಸಮೀರ್, ಮುನೀರ್ ಎಂಬಿವರ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಇದೇ ವೇಳೆ ಪೊಲೀಸರ ಕೈಗೆ  ಸಿಗದೆ ತಪ್ಪಿಸಿಕೊಂಡ ಇವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಗುಪ್ತ ಮಾಹಿತಿಯ ಆಧಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭಾರತ್ ರೆಡ್ಡಿಯವರ ನಿರ್ದೇಶ ಮೇರೆಗೆ ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್‌ರ ಮೇಲ್ನೋಟದಲ್ಲಿ ಮೇಲ್ಪರಂಬ ಇನ್‌ಸ್ಪೆಕ್ಟರ್ ಎ.ಸಂತೋಷ್ ಕುಮಾರ್, ಎಸ್.ಐ.ವಿ.ಕೆ.ಅನೀಶ್, ರಾಜಪುರಂ ಎಸ್‌ಐ ಪ್ರದೀಪ್, ಡಿವೈಎಸ್ಪಿಯವರ ಸ್ಕ್ವಾಡ್ ಸದಸ್ಯರು ಡಾನ್ಸಾಪ್ ತಂಡ ನಿನ್ನೆ ರಾತ್ರಿ 10 ಗಂಟೆ ವೇಳೆ  ನಡೆಸಿದ ತಪಾಸಣೆಯಲ್ಲಿ ಗಾಂಜಾ ವಶಪಡಿಸಲಾಗಿದೆ. ಗಾಂಜಾ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಎರಡಂತಸ್ತಿನ ಮನೆಯ ಮೇಲಿನ ಮಹಡಿಯ ಬೆಡ್‌ರೂಂನಲ್ಲಿ ಬಚ್ಚಿಟ್ಟ ಸ್ಥಿತಿಯಲ್ಲಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ಬೇರೊಂದು ಘಟನೆಯಲ್ಲಿ 0.330 ಗ್ರಾಂ ಎಂಡಿಎಂಎ ಸಹಿತ ಮಾಂಙಾಡ್ ಆರಡ್ಕ ಇಕೆ. ಹೌಸ್‌ನ ರಿಸ್ವಾನ್ (27)ನನ್ನು ಮೇಲ್ಪರಂಬ ಇನ್‌ಸ್ಪೆಕ್ಟರ್ ಎ. ಸಂತೋಷ್ ಕುಮಾರ್ ಬಂಧಿಸಿದ್ದಾರೆ. ಆರೋಪಿ ಯನ್ನು ಮನೆಯಿಂದಲೇ ಸೆರೆಹಿಡಿಯ ಲಾಗಿದೆ. ಕಲ್ಲಿಕೋಟೆ, ಕಣ್ಣೂರು, ವಯನಾಡು, ಕಾಸರಗೋಡು ಜಿಲ್ಲೆಗಳಲ್ಲಾಗಿ ನಡೆದ ಸ್ಪೆಷಲ್ ಡ್ರೈವ್‌ನಲ್ಲಿ ವಿವಿಧ ಮಾದಕವಸ್ತುಗ ಳೊಂದಿಗೆ ಹಲವರನ್ನು ಸೆರೆಹಿಡಿದಿರು ವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

You cannot copy contents of this page