ಮನೆಯಿಂದ 23 ಪವನ್ ಚಿನ್ನ, 2 ಲಕ್ಷ ರೂ.ಗಳ ಚಿನ್ನದ ಉಂಗುರ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಕಾಸರಗೋಡು: ನಿವೃತ್ತ ಬ್ಯಾಂಕ್ ನೌಕರನ ಮನೆಯಿಂದ 23 ಪವನ್ ಚಿನ್ನಾಭರಣ ಹಾಗೂ 2 ಲಕ್ಷ ರೂಪಾಯಿ ಮೌಲ್ಯದ ವಜ್ರದುಂಗುರ ಕಳವುಗೈದ ಪ್ರಕರಣದಲ್ಲಿ ಕಾಸರಗೋಡು ನಿವಾಸಿಗಳಾದ ಇಬ್ಬರನ್ನು ಬಂಧಿಸಲಾಗಿದೆ. ನೆಲ್ಲಿಕಟ್ಟೆ ಚರ್ಲಡ್ಕದ ಕಾಜಾ ಹುಸೈನ್ (40), ಚೆಂಗಳ ಆಲಂಪಾಡಿಯ ಅಬ್ದುಲ್ ಲತೀಫ್ (38) ಎಂಬಿವರನ್ನು ಪಯ್ಯ ನ್ನೂರು ಡಿವೈಎಸ್ಪಿ ಕೆ. ವಿನೋದ್ ನೇತೃತ್ವದ ಪೊಲೀಸ್ ತಂಡ ಸೆರೆಹಿಡಿದಿದೆ. ಕಳವುಗೈದ ಸೊತ್ತುಗಳನ್ನು ಕಾಸರಗೋಡಿನಲ್ಲಿ ಮಾರಾಟಗೈದಿರುವುದಾಗಿ ಆರೋಪಿ ಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕಾಸರಗೋಡಿಗೆ ತಲುಪಿಸಿ ಮಾಹಿತಿಗಳನ್ನು ಸಂಗ್ರಹಿ ಸಲಾಗಿದೆ. ಜೂನ್ 19ರಂದು ಮಾತಮಂ ಗಲಂ-ಮಾತುವಯಲ್ ಪಾಣಪ್ಪುಳ ರಸ್ತೆಯಲ್ಲಿ ಮಾತುವ ಯಲ್ ಸಮೀಪ ನಿವೃತ್ತ ಎಸ್‌ಬಿಐ ನೌಕರ ಪಿ. ಜಯಪ್ರಸಾದ್‌ರ ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮನೆ ಮಂದಿ ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ಮನೆಯ ಬಾಗಿಲು ಮುರಿದು ಕಳ್ಳರು ಒಳನುಗ್ಗಿ ಕಳವು ನಡೆಸಿದ್ದರು. ಕಾಸರಗೋಡು ನೋಂದಾವಣೆಯ ಸ್ಕೂಟರ್‌ನಲ್ಲಿ ತಲುಪಿ ಕಳವು ನಡೆಸಿರುವುದಾಗಿ ಸಿಸಿ ಟಿವಿ ದೃಶ್ಯಗಳಿಂದ ತಿಳಿದುಬಂದಿದ್ದು, ವೈಜ್ಞಾನಿಕ ರೀತಿಯ ತನಿಖೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. ಈ ಪ್ರಕರಣದಲ್ಲಿ ಮುಖ್ಯ ಆರೋ ಪಿಯಾದ ಓರ್ವ ಆರೋಪಿ ಸೆರೆಗೀ ಡಾಗಲು ಬಾಕಿಯಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪಾಲಕ್ಕಾಡ್ ನಿವಾಸಿಯಾದ ಕಾಜ ಹುಸೈನ್ ಇತ್ತೀಚೆಗೆ ಚರ್ಲಡ್ಕದಲ್ಲಿ ವಾಸ ಆರಂಭಿಸಿದ್ದನು.